ಬೆತ್ತಲೆ ಜಗತ್ತು
=======
ಭಗವದ್ಗೀತೆ ಉಸುರುವ ನನ್ನ ಬಾಯಿ ಗಬ್ಬೆನ್ನುತ್ತದೆ
ಕಷ್ಟ ಕಾಲಕ್ಕಾದ ಗೆಳೆಯನ ಜೇಬಲ್ಲಿ ಇನ್ನೊಂದಷ್ಟು ಚಿಲ್ಲರೆ
ಜಗವನ್ನೇ ಗೆಲ್ಲಲೊರಟ ಸನ್ಯಾಸಿಯ ಅಕ್ಕಪಕ್ಕ ಮುಂಜಾನೆಯ ವೀರ್ಯದ ವಾಸನೆ,
ಸುಮ್ಮನಿದ್ದರೂ ಕೆಣಕುವ ಅವಳಲ್ಲಿ ಅತೃಪ್ತ ಭಾವ
ಪಕ್ಕದ ಮನೆಯ ಗಡಸು ಆಳಿನ ಮೇಲೆ ಓರೆಗಣ್ಣು
ನಾನೂ ರಾಮನಲ್ಲ,
ಪ್ರಸ್ತಕ್ಕೆ ಒಪ್ಪದ ಆಂಡಾಳಮ್ಮನ ಎದೆಯಲ್ಲಿದೆ ಹಳೇ ಗೆಳೆಯನ
ಸರಸದ ನರುಗಂಪು,
ಆ ಹಳೇ ಗೆಳೆಯನ ಲೆಕ್ಕದಲ್ಲಿ ಇವಳದ್ದೇ ಅತೀ ಕೆಟ್ಟ ಅನುರಾಗ,
ಪದೇ ಪದೇ ಕೇಳಿದರೆ ಮಾತು ಸುಳ್ಳಾಗುತ್ತದೆ
ಕೆಲವೊಮ್ಮೆ ಕೇಳುವುದರ ಮೊದಲೇ ಬಲಿತಿರುತ್ತದೆ,
ಇಲ್ಲವೇ ಇಂತದ್ದೊಂದು ಕೆಟ್ಟ ಕವನವಾಗುತ್ತದೆ.
.......ರಾಶೇಕ್ರ

ತುಂಬಾ 'ನಿಜಗಳು' ಒಟ್ಟಿಗೆ ಪೋಣಿಸಿಕೊಟ್ಟರೆ ಹೇಗೆ? ಛದ್ಮವೇಷ ಧರಿಸಿಕೊಂಡೇ ದಿನಪೂರ ಓಡಾಡುವ ಪ್ರಭೂತಿಗಳ ಪಾಡೇನು ರಾಜಶೇಖರಾ?
ReplyDelete