ಕಾವ್ಯ ಹುಟ್ಟುತ್ತದೆ ಬೆಣ್ಣೆ ಮೋಡಗಳಲ್ಲಿ
ಕಣ್ಣ ಸನ್ನೆಯಲ್ಲಿ ಬಿದ್ದ ಹನಿಗಳಲ್ಲಿ
ಒದ್ದೆ ಗೋಡೆ ಮೇಲೆ ಹಬ್ಬಿದ ಹಸಿರು ಪಾಚಿಯಲ್ಲಿ
ಅವಳಿರುವಿಕೆಯಲ್ಲಿ ಆತುರದ ಸ್ಖಲನದಲಿ
ತೃಪ್ತ ಭಾವದೊಳಗರಳುವ ಮುಖವಾಡದಲಿ
ಎಳೆ ಮೀಸೆಯಲ್ಲೇ ನಗುವ ಪುಂಡರೆದೆಗಳಲ್ಲಿ
ನನ್ನೆದೆ ಗೂಡೊಳಡಗಿಸಿಕೊಂಡವಳಿಗೇ
ಕೊಟ್ಟು ಬಿಟ್ಟೆನೆಂದ ಹಸಿ ಮಿಥ್ಯದಲಿ
ಕವಲುದಾರಿಗೆ ತಿರುವಿ ನಕ್ಕವಳ ಹೊಕ್ಕುಳಲಿ
ಹಾಲ್ಗೆನ್ನೆ ಚುಚ್ಚಿದ ಎದೆ ರೋಮಗಳ
ಹಾಸಿಗೆ ಎಂದುದರಲ್ಲಿ
ಬಿಗಿ ರವಿಕೆಯೊಳಗೆ ಉಸಿರುಗಟ್ಟಿಸಿಕೊಳುವ ಮೃದು ಎದೆಗಳಲಿ
ರಾಮ ರಾಜ್ಯದೊಳಗೊಬ್ಬನೇ ಪ್ರಜೆಯ
ಅಹೋ ರಾತ್ರಿಯ ಡೌಟಿನಲಿ
ವಿವಾದವಾದೀತೆಂದಿಟ್ಟ ಅಕಾಲಿಕ ಡಾಟಿನಲಿ.
........ರಾಶೇಕ್ರ
ಕಣ್ಣ ಸನ್ನೆಯಲ್ಲಿ ಬಿದ್ದ ಹನಿಗಳಲ್ಲಿ
ಒದ್ದೆ ಗೋಡೆ ಮೇಲೆ ಹಬ್ಬಿದ ಹಸಿರು ಪಾಚಿಯಲ್ಲಿ
ಅವಳಿರುವಿಕೆಯಲ್ಲಿ ಆತುರದ ಸ್ಖಲನದಲಿ
ತೃಪ್ತ ಭಾವದೊಳಗರಳುವ ಮುಖವಾಡದಲಿ
ಎಳೆ ಮೀಸೆಯಲ್ಲೇ ನಗುವ ಪುಂಡರೆದೆಗಳಲ್ಲಿ
ನನ್ನೆದೆ ಗೂಡೊಳಡಗಿಸಿಕೊಂಡವಳಿಗೇ
ಕೊಟ್ಟು ಬಿಟ್ಟೆನೆಂದ ಹಸಿ ಮಿಥ್ಯದಲಿ
ಕವಲುದಾರಿಗೆ ತಿರುವಿ ನಕ್ಕವಳ ಹೊಕ್ಕುಳಲಿ
ಹಾಲ್ಗೆನ್ನೆ ಚುಚ್ಚಿದ ಎದೆ ರೋಮಗಳ
ಹಾಸಿಗೆ ಎಂದುದರಲ್ಲಿ
ಬಿಗಿ ರವಿಕೆಯೊಳಗೆ ಉಸಿರುಗಟ್ಟಿಸಿಕೊಳುವ ಮೃದು ಎದೆಗಳಲಿ
ರಾಮ ರಾಜ್ಯದೊಳಗೊಬ್ಬನೇ ಪ್ರಜೆಯ
ಅಹೋ ರಾತ್ರಿಯ ಡೌಟಿನಲಿ
ವಿವಾದವಾದೀತೆಂದಿಟ್ಟ ಅಕಾಲಿಕ ಡಾಟಿನಲಿ.
........ರಾಶೇಕ್ರ
No comments:
Post a Comment