ಗುರುಗಳ ಪ್ರೇರಿತ (ಬಿಳಿ ಹುಡುಗಿ)
ಹೊನ್ನ ಹಸಿರ ಹೊದ್ದ ಎಳೆನೇರಳೆ ಮರದ
ಕೆಳಗೆ ಕರಿಕಾಗೆ ತಿಂದುಳಿದು ಬಿದ್ದ ಹಣ್ಣ
ತಿನ್ನುತಾ ಕಂಡ ಕನಸು ನೀಲಿಯದೆಂಬುದು, ಒಟ್ಟಿಗೇ
ಬೆಳೆದ ಬಿಳಿ ಹುಡುಗಿಯ ಸಣ್ಣವಾದ,
ಹೊತ್ತು ಹುಟ್ಟುವಾ ಮೊದಲೆ
ತಣ್ಣೀರಿನಲಿ ಮುಳುಗಿ ಅರೆಬೆತ್ತಲೆ ಮಾಗಿ
ಛಳಿಯಲಿ ನಡುಗಿದ್ದು ನನ್ನ ನೋಡಿ
ಎಂಬುದೂ ಕೂಡ ಅವಳದ್ದೇ....
ಖಾಲಿ ಹೊಟ್ಟೆಯಲಿ ನಡೆದು ಕಬ್ಬು
ಗದ್ದೆಗೆ ನುಸುಳಿ ಎರಡು ಜೊಳೆಗೆ ಗಾಣಹಾಕಿ
ಮುರಿದು ಬಿದ್ದ ಹಲ್ಲು ಅವಳ ಆಣ್ಣ
ಉದುರಿಸಿದ್ದಂತೆ, ಜಂಭದವಳಿಗೆ,
ಹೊಳೆ ಪಕ್ಕದಲಿ ಎಡಗೈಲಿ ಪ್ಯಾಂಟಿಡಿದು
ಬರಿಗಾಲಲಿ ನಡೆವಾಗ ಚುಚ್ಚಿದ ಬಿದಿರು ಮುಳ್ಳು
ಅವಳೊಪ್ಪದಿದ್ದರೂ ಛಂಡಿ ಹಿಡಿದು
ಮನಗೆ ಹೊರಟಿದ್ದಕ್ಕೆ ಅವಳಿಟ್ಟ ಶಾಪಕ್ಕೆ
ದೇವರ ಬೆಂಬಲದ ಸೂಚ್ಯಂಕವಂತೆ,
ಸಗಣಿ ನೆಲದ ಮೇಲೆ ಹರಿದ ಚಾಪೆಯ ಹಾಸಿ
ಮೂಡಣಕೆ ದಿಂಬೆಸೆದು ಅಂಗಾತ ಬಿದ್ದು ಹೊದ್ದ
ಕುರಿ ಕೂದಲಿನ ಕಂಬಳಿಯ ಬಿಸಿ
ಅವಳಾಗುವಳೇ ಎಂಬುದಷ್ಟೇ ನನ್ನ ಚಿಂತೆ,
.......ರಾಶೇಕ್ರ
ಹೊನ್ನ ಹಸಿರ ಹೊದ್ದ ಎಳೆನೇರಳೆ ಮರದ
ಕೆಳಗೆ ಕರಿಕಾಗೆ ತಿಂದುಳಿದು ಬಿದ್ದ ಹಣ್ಣ
ತಿನ್ನುತಾ ಕಂಡ ಕನಸು ನೀಲಿಯದೆಂಬುದು, ಒಟ್ಟಿಗೇ
ಬೆಳೆದ ಬಿಳಿ ಹುಡುಗಿಯ ಸಣ್ಣವಾದ,
ಹೊತ್ತು ಹುಟ್ಟುವಾ ಮೊದಲೆ
ತಣ್ಣೀರಿನಲಿ ಮುಳುಗಿ ಅರೆಬೆತ್ತಲೆ ಮಾಗಿ
ಛಳಿಯಲಿ ನಡುಗಿದ್ದು ನನ್ನ ನೋಡಿ
ಎಂಬುದೂ ಕೂಡ ಅವಳದ್ದೇ....
ಖಾಲಿ ಹೊಟ್ಟೆಯಲಿ ನಡೆದು ಕಬ್ಬು
ಗದ್ದೆಗೆ ನುಸುಳಿ ಎರಡು ಜೊಳೆಗೆ ಗಾಣಹಾಕಿ
ಮುರಿದು ಬಿದ್ದ ಹಲ್ಲು ಅವಳ ಆಣ್ಣ
ಉದುರಿಸಿದ್ದಂತೆ, ಜಂಭದವಳಿಗೆ,
ಹೊಳೆ ಪಕ್ಕದಲಿ ಎಡಗೈಲಿ ಪ್ಯಾಂಟಿಡಿದು
ಬರಿಗಾಲಲಿ ನಡೆವಾಗ ಚುಚ್ಚಿದ ಬಿದಿರು ಮುಳ್ಳು
ಅವಳೊಪ್ಪದಿದ್ದರೂ ಛಂಡಿ ಹಿಡಿದು
ಮನಗೆ ಹೊರಟಿದ್ದಕ್ಕೆ ಅವಳಿಟ್ಟ ಶಾಪಕ್ಕೆ
ದೇವರ ಬೆಂಬಲದ ಸೂಚ್ಯಂಕವಂತೆ,
ಸಗಣಿ ನೆಲದ ಮೇಲೆ ಹರಿದ ಚಾಪೆಯ ಹಾಸಿ
ಮೂಡಣಕೆ ದಿಂಬೆಸೆದು ಅಂಗಾತ ಬಿದ್ದು ಹೊದ್ದ
ಕುರಿ ಕೂದಲಿನ ಕಂಬಳಿಯ ಬಿಸಿ
ಅವಳಾಗುವಳೇ ಎಂಬುದಷ್ಟೇ ನನ್ನ ಚಿಂತೆ,
.......ರಾಶೇಕ್ರ
No comments:
Post a Comment