Thursday, 27 June 2013

ಅಚಾನಕ್

ಉದ್ದ ಕಾಲಿನ ತುಂಡುಗೂದಲಿನ ಆಳೊಬ್ಬ
ಮಾಡಲು ಕೆಲಸವಿರದೆ ಅಂಡಾಪೋಲಿಯಾಗಿ
ಅಲೆಯುವುದರ ಬದಲಿಗೆ, ನೀಳ ಜಡೆಯ
ಮೋಟು ಲಂಗದ ಹುಡುಗಿಯ ಉಬ್ಬಿದೆದೆಯ
ವಿಮರ್ಶೆ ಮಾಡುತ್ತಿದ್ದ, ಪಕ್ಕದಲಿ ಕೂತ
ಬೀಡೀವಾಲಾನಿಗೆ ಅನವಶ್ಯಕ ಒಲವಾಗಿ
ಈಗ ಸಂಸಾರ ಸಮೇತ ಶಂಕರ್ ನಾಗ್
ಸರ್ಕಲ್ಲಿನ ಪಕ್ಕದ ಕಾಲೋನಿಯ ಬಲತಿರುವಿನ
ಮೂರನೇ ಮನೆಯೊಳಗೆ ಕಪ್ಪು ಬಿಳುಪು ಟೀವಿಯ
ಕಲರ್ಸ್ ಚಾನೆಲ್ಲಿನ ಪ್ರಖ್ಯಾತ ಧಾರಾವಾಹಿಯ ನಡುವಿನಲಿ
ಅಚಾನಕ್ ಬಂದ ಜಾಹೀರಾತಿಗೆದರಿ ಗೆಳೆಯನಿಗೆ
ಕರೆ ಮಾಡುತ್ತಿದ್ದಾನೆ, ಅತ್ತ ಕಡೆಯಿಂದ ಹೆಣ್ಣು ಧ್ವನಿಯೊಂದು
ನೀವು ಕರೆಮಾಡಿರುವ ಚಂದಾದಾರರು ತಮ್ಮ ಒಳ ಬರುವ
ಕರೆಗಳನ್ನು ತಡೆಹಿಡಿದಿದ್ದಾರೆ ಎನ್ನುತ್ತ ಸಣ್ಣಗೆ ನಕ್ಕಿದ್ದಾಳೆ.

........ರಾಶೇಕ್ರ

No comments:

Post a Comment