ಟಾರೋಡು ಬದಿಯಲ್ಲಿ ತಳ್ಳುಗಾಡಿಯ
ಒಳಗೆ ಬಾಣಲಿಯಲಿ ಬೇಯುತ್ತದೆ ಪ್ರಾಣ
ನೂರಂಕಿಯ ಸುಳಿಯಲ್ಲಿ
ತಿರುವಿ ತಿರುವಿ ಎದ್ದು ಮಗುಚಿ ಬೀಳುತ್ತದೆ
ಒಂದಷ್ಟು ಪ್ರೀತಿ ಪ್ರೇಮ ಲೆಕ್ಕಾಚಾರ
ಆಯತಪ್ಪಿ ಬಿದ್ದ ಕನಸುಗಳ
ರೆಕ್ಕೆ ಪುಕ್ಕಗಳಿಗೆ ದಾರ ಬಿಗಿದು
ಹಾರಲು ಬಿಡುತ್ತದೆ
ಅಲ್ಲಿ ಅರಳಿ ಇಲ್ಲಿ ಘಮ ಸೂಸುವ ಹೆಂಡತಿ
ಹೆಸರಿನಲ್ಲೊಂದನ್ನು ಹೆಕ್ಕಿ ಬಗಲಿಗಿರಿಸಿಕೊಂಡ ಮಕ್ಕಳು
ಏಕಮಾತ್ರ ಸ್ಖಲನ ನನ್ನಿಂದ ಇನ್ನೆಲ್ಲೋ ಅನಂತವಾಯ್ತು ಗೆಳತಿಗೆ
ಆಗೆಲ್ಲ ಹಾ ಎಂದಿತ್ತು ಪ್ರಾಣ
ನಿಯಮಾನುಸಾರ ಎಡದಲ್ಲೇ ನಡೆದರೂ
ಚಂಗನೆ ಹಾರುತ್ತದೆ ಧಿಡೀರ್ ಧಡಾರ್ ಸದ್ದಾಗಿ
ನರಕಕ್ಕೋ ಸಗ್ಗಕ್ಕೋ
ಗುರುತ್ವಾಕರ್ಷಣ ಇಲ್ಲಿ ಗೌಣ.
......ರಾಶೇಕ್ರ
ಒಳಗೆ ಬಾಣಲಿಯಲಿ ಬೇಯುತ್ತದೆ ಪ್ರಾಣ
ನೂರಂಕಿಯ ಸುಳಿಯಲ್ಲಿ
ತಿರುವಿ ತಿರುವಿ ಎದ್ದು ಮಗುಚಿ ಬೀಳುತ್ತದೆ
ಒಂದಷ್ಟು ಪ್ರೀತಿ ಪ್ರೇಮ ಲೆಕ್ಕಾಚಾರ
ಆಯತಪ್ಪಿ ಬಿದ್ದ ಕನಸುಗಳ
ರೆಕ್ಕೆ ಪುಕ್ಕಗಳಿಗೆ ದಾರ ಬಿಗಿದು
ಹಾರಲು ಬಿಡುತ್ತದೆ
ಅಲ್ಲಿ ಅರಳಿ ಇಲ್ಲಿ ಘಮ ಸೂಸುವ ಹೆಂಡತಿ
ಹೆಸರಿನಲ್ಲೊಂದನ್ನು ಹೆಕ್ಕಿ ಬಗಲಿಗಿರಿಸಿಕೊಂಡ ಮಕ್ಕಳು
ಏಕಮಾತ್ರ ಸ್ಖಲನ ನನ್ನಿಂದ ಇನ್ನೆಲ್ಲೋ ಅನಂತವಾಯ್ತು ಗೆಳತಿಗೆ
ಆಗೆಲ್ಲ ಹಾ ಎಂದಿತ್ತು ಪ್ರಾಣ
ನಿಯಮಾನುಸಾರ ಎಡದಲ್ಲೇ ನಡೆದರೂ
ಚಂಗನೆ ಹಾರುತ್ತದೆ ಧಿಡೀರ್ ಧಡಾರ್ ಸದ್ದಾಗಿ
ನರಕಕ್ಕೋ ಸಗ್ಗಕ್ಕೋ
ಗುರುತ್ವಾಕರ್ಷಣ ಇಲ್ಲಿ ಗೌಣ.
......ರಾಶೇಕ್ರ
No comments:
Post a Comment