ಗುಂಪು ಮಾತಾಡುವಾಗ ಬಾಯ್ಮುಚ್ಚುತ್ತೇನೆ
ನನ್ನ ಕಿವಿ ಆ..... ಎನ್ನುತ್ತದೆ.
ಕೈ ಕಟ್ಟಿಕೊಳ್ಳುತ್ತೇನೆ
ಮುಗ್ಧತೆ ಎಲ್ಲವನ್ನೂ ಬಿಚ್ಚಿಕೊಳ್ಳುತ್ತದೆ.
ಕೆಮ್ಮುತ್ತೇನೆ, ಗುಂಪೊಳಗೆ ಗದ್ದಲ,
ಅವರ ಕಿವಿಗೆ ಇವರ, ಇವರ ಕಿವಿಗೆ ಅವರ ನಾಲಿಗೆ ನುಗ್ಗುತ್ತದೆ.
ತಲೆ ಎತ್ತಿದರೆ ಜಗದಗಲ ಆಕಾಶ
'ನಾನು' ಗೌಣವೆಂದು ನೆಲ ನೋಡುತ್ತೇನೆ.
ಅತ್ತಾಗ ಬೊಗಸೆಯೊಡ್ಡುತ್ತಾರೆ
ಅದ ನೋಡಿ ನಗು ಉಮ್ಮಳಿಸುತ್ತದೆ.
ಅವರು ನಕ್ಕಾಗ ನಾನೂ ನಗುತ್ತೇನೆ
ನಾ ನಕ್ಕರೆ ಅವರು ಕೆಂಡಾಮಂಡಲ, ಜಮದಗ್ನಿ ಬೆಚ್ಚಿದ್ದಾನೆ.
ಗುಡಿ ಹೊಕ್ಕುವಾಗ
ನನ್ನ ಎಡಗಾಲು ಅದುರುತ್ತದೆ, ಬಲಗಾಲು ಮುಂದೆ.....!
ಪೈಪೋಟಿಯ ಮೇಲೆ ಓಡುತ್ತೇನೆ,
'ಹಿಂದೆಯೇ' ಸೋತಿದ್ದೇನೆ.
........ರಾಶೇಕ್ರ
ನನ್ನ ಕಿವಿ ಆ..... ಎನ್ನುತ್ತದೆ.
ಕೈ ಕಟ್ಟಿಕೊಳ್ಳುತ್ತೇನೆ
ಮುಗ್ಧತೆ ಎಲ್ಲವನ್ನೂ ಬಿಚ್ಚಿಕೊಳ್ಳುತ್ತದೆ.
ಕೆಮ್ಮುತ್ತೇನೆ, ಗುಂಪೊಳಗೆ ಗದ್ದಲ,
ಅವರ ಕಿವಿಗೆ ಇವರ, ಇವರ ಕಿವಿಗೆ ಅವರ ನಾಲಿಗೆ ನುಗ್ಗುತ್ತದೆ.
ತಲೆ ಎತ್ತಿದರೆ ಜಗದಗಲ ಆಕಾಶ
'ನಾನು' ಗೌಣವೆಂದು ನೆಲ ನೋಡುತ್ತೇನೆ.
ಅತ್ತಾಗ ಬೊಗಸೆಯೊಡ್ಡುತ್ತಾರೆ
ಅದ ನೋಡಿ ನಗು ಉಮ್ಮಳಿಸುತ್ತದೆ.
ಅವರು ನಕ್ಕಾಗ ನಾನೂ ನಗುತ್ತೇನೆ
ನಾ ನಕ್ಕರೆ ಅವರು ಕೆಂಡಾಮಂಡಲ, ಜಮದಗ್ನಿ ಬೆಚ್ಚಿದ್ದಾನೆ.
ಗುಡಿ ಹೊಕ್ಕುವಾಗ
ನನ್ನ ಎಡಗಾಲು ಅದುರುತ್ತದೆ, ಬಲಗಾಲು ಮುಂದೆ.....!
ಪೈಪೋಟಿಯ ಮೇಲೆ ಓಡುತ್ತೇನೆ,
'ಹಿಂದೆಯೇ' ಸೋತಿದ್ದೇನೆ.
........ರಾಶೇಕ್ರ
No comments:
Post a Comment