ಡಾಂಬರು ರೋಡಿನ ಪ್ಯಾಚುಗಳಲ್ಲಿ
ನನ್ನ ಕನಸುಗಳ ಗೋಚರ
ರೋಡು ಮಧ್ಯೆಯ ಕಚ್ಚಾಟಾರಿನ
ಮೆದು ಹಾಸುಗಳಲ್ಲಿ
ಮಂದಸ್ಮಿತ ಬಿಳಿ ಪಾದಗಳಿಗೆ
ಮ್ರದುವಾಗಿ ಬೇಯಿಸಿ ಹೊಳೆಯುತ್ತವೆ,
ಆ ದಿಗಂತದವರೆಗೂ ಅಕ್ಷಿಪಟಲ ಹಾಯ್ವವರೆಗೂ,
ಬಲಬದಿಯ ಕೊನೆಗದೋ ಬೆಟ್ಟ
ಅಲ್ಲೂ ಅಡಗಿವೆ ಆ ಕಡೆಯಲ್ಲಿ
ಮರೆಯಾಗಿ ನಗುತ್ತವೆ ಕಣ್ಣುಗಳು
ಹೌದು ಅದೇ ಕಣ್ಣುಗಳು
ಇರಬೇಕವು ಛಾವಣಿಯ ಹೆಂಚುಗಳು,
ಎಡಬದಿಯಲದೋ ಗತಿಸಿದ್ದೆಲ್ಲವ
ನೆನೆಸುತ್ತಿದೆ ಈ ಬರೀ ಗೋಡೆ
ಕೃತಕ ಹೃದಯದೊಳಗೆ,
ಭಾರೀ ಪ್ರೇಮದ ಸಾವಿನ
ಸೂತಕದ ವಾಸನೆ ಮೂಗಿಗಡರುತ್ತಿದೆ,
ನೆತ್ತಿ ಸುಡುತ್ತ ನೇಸರ ಅಲ್ಲಲ್ಲ
ಮಧ್ಯಾಹ್ನದಲಿ ಅವರೇ ಹೊತ್ತಿಸಿದ ಬೆಂಕಿ
ಧಗಧಗಿಸಿ ಉರಿದು ಸೀದಾ
ನೆತ್ತಿಯ ಮೇಲೆ ಬಿದ್ದು ಸುರ್ರೆನ್ನುತ್ತದೆ
ಬಿಸಿ ಬಾಣಲಿಯ ಮೇಲೆ ಬಿದ್ದ ನೀರಂತೆ
ತಣ್ಣಗಾದೀತೆ ಮಾಡಿದಪರಾಧ.
........ರಾಶೇಕ್ರ
ನನ್ನ ಕನಸುಗಳ ಗೋಚರ
ರೋಡು ಮಧ್ಯೆಯ ಕಚ್ಚಾಟಾರಿನ
ಮೆದು ಹಾಸುಗಳಲ್ಲಿ
ಮಂದಸ್ಮಿತ ಬಿಳಿ ಪಾದಗಳಿಗೆ
ಮ್ರದುವಾಗಿ ಬೇಯಿಸಿ ಹೊಳೆಯುತ್ತವೆ,
ಆ ದಿಗಂತದವರೆಗೂ ಅಕ್ಷಿಪಟಲ ಹಾಯ್ವವರೆಗೂ,
ಬಲಬದಿಯ ಕೊನೆಗದೋ ಬೆಟ್ಟ
ಅಲ್ಲೂ ಅಡಗಿವೆ ಆ ಕಡೆಯಲ್ಲಿ
ಮರೆಯಾಗಿ ನಗುತ್ತವೆ ಕಣ್ಣುಗಳು
ಹೌದು ಅದೇ ಕಣ್ಣುಗಳು
ಇರಬೇಕವು ಛಾವಣಿಯ ಹೆಂಚುಗಳು,
ಎಡಬದಿಯಲದೋ ಗತಿಸಿದ್ದೆಲ್ಲವ
ನೆನೆಸುತ್ತಿದೆ ಈ ಬರೀ ಗೋಡೆ
ಕೃತಕ ಹೃದಯದೊಳಗೆ,
ಭಾರೀ ಪ್ರೇಮದ ಸಾವಿನ
ಸೂತಕದ ವಾಸನೆ ಮೂಗಿಗಡರುತ್ತಿದೆ,
ನೆತ್ತಿ ಸುಡುತ್ತ ನೇಸರ ಅಲ್ಲಲ್ಲ
ಮಧ್ಯಾಹ್ನದಲಿ ಅವರೇ ಹೊತ್ತಿಸಿದ ಬೆಂಕಿ
ಧಗಧಗಿಸಿ ಉರಿದು ಸೀದಾ
ನೆತ್ತಿಯ ಮೇಲೆ ಬಿದ್ದು ಸುರ್ರೆನ್ನುತ್ತದೆ
ಬಿಸಿ ಬಾಣಲಿಯ ಮೇಲೆ ಬಿದ್ದ ನೀರಂತೆ
ತಣ್ಣಗಾದೀತೆ ಮಾಡಿದಪರಾಧ.
........ರಾಶೇಕ್ರ
No comments:
Post a Comment