Friday, 14 June 2013

ಛೇ

ಸತ್ತಾಗ ಸುಡಲು ಗಂಡೇ ಬೇಕೆಂದ
ಆಚಾರವಾದಿಯ ಅರ್ಧಾಂಗಿ ಕೆಡವಿದ
ಆರು ಹೆಣ್ಣು ಭ್ರೂಣಗಳ ಕುತ್ತಿಗೆಗೆ
ಹದಿನಾರು ಸಾವಿರ ಹಸ್ತ ರೇಖೆಗಳಿಂದ
ಮೆತ್ತಗೆ ಒತ್ತುವಾಗ ಕಣ್ಣು ಮುಚ್ಚಿ
ಪೂರ್ವಕ್ಕೆ ತಿರುಗಿದ್ದ,
ಸೂರ್ಯದೇವ ಪಶ್ಚಿಮದಲ್ಲಿ ಅಂಗಾತ ಬಿದ್ದು
ಶಿವಶಿವಾ ಎಂದ.

2 comments: