ನೀಲಿ ಬಾನ ಆಚೆ ಗೆಳತಿ
ಬಾರೆ ತೇಲಿ ಮುಳುಗುವ
ಅಲ್ಲಿ ಮನೆಯ ಮಾಡಿಕೊಂಡು
ಸಣ್ಣ ದೀಪ ಉರಿಸುವ
ಬಂಧು ಬಳಗವೇನು ಬೇಡ
ಎಲ್ಲ ತೊರೆದು ಹಾರುವ
ಅಲ್ಲಿವರೆಗು ಜೀಕುವ
ಹೆತ್ತು ಹೊತ್ತವರ ನೆನಪು ಯಾಕೆ
ನಾನೆ ಅಪ್ಪ ಅವ್ವನು
ಬೇರೆ ಯಾಕೆ ಬೇಕು ಅಲ್ಲಿ
ನಮಗೆ ನಮ್ಮದೇ ಕಾನೂನು
ತೇಲುತೊಂದು ದೋಣಿಯೊಳಗೆ
ಹ್ರದಯ ಗೀತೆ ಗುನುಗುವ
ಬಾರೆ ಗೆಳತಿ ಬಾರೆ ಸನಿಹ
ಬಾರಿ ಬಾರಿ ರಮಿಸುವ
ನಾಕು ಮೂಲೆ ಚೌಕ ಬರೆದು
ಸೋತು ಸೋತು ಗೆಲ್ಲುವ
ಅಲ್ಲಿ ಉಳುಮೆ ಗಿಳುಮೆ ಮಾಡಿ
ನಲಿವುಗಳನೆ ಬೆಳೆಯುವ
ನಾವು ನಾವು ಎಂದುಕೊಂಡೆ
ನೂರು ಜನ್ಮ ಕಳೆಯುವ.
…….ರಾಶೇಕ್ರ
ಬಾರೆ ತೇಲಿ ಮುಳುಗುವ
ಅಲ್ಲಿ ಮನೆಯ ಮಾಡಿಕೊಂಡು
ಸಣ್ಣ ದೀಪ ಉರಿಸುವ
ಬಂಧು ಬಳಗವೇನು ಬೇಡ
ಎಲ್ಲ ತೊರೆದು ಹಾರುವ
ಅಲ್ಲಿವರೆಗು ಜೀಕುವ
ಹೆತ್ತು ಹೊತ್ತವರ ನೆನಪು ಯಾಕೆ
ನಾನೆ ಅಪ್ಪ ಅವ್ವನು
ಬೇರೆ ಯಾಕೆ ಬೇಕು ಅಲ್ಲಿ
ನಮಗೆ ನಮ್ಮದೇ ಕಾನೂನು
ತೇಲುತೊಂದು ದೋಣಿಯೊಳಗೆ
ಹ್ರದಯ ಗೀತೆ ಗುನುಗುವ
ಬಾರೆ ಗೆಳತಿ ಬಾರೆ ಸನಿಹ
ಬಾರಿ ಬಾರಿ ರಮಿಸುವ
ನಾಕು ಮೂಲೆ ಚೌಕ ಬರೆದು
ಸೋತು ಸೋತು ಗೆಲ್ಲುವ
ಅಲ್ಲಿ ಉಳುಮೆ ಗಿಳುಮೆ ಮಾಡಿ
ನಲಿವುಗಳನೆ ಬೆಳೆಯುವ
ನಾವು ನಾವು ಎಂದುಕೊಂಡೆ
ನೂರು ಜನ್ಮ ಕಳೆಯುವ.
…….ರಾಶೇಕ್ರ
No comments:
Post a Comment