ಎಲೈ ಮನವೇ..........!
ಕಟುನುಡಿಯನಾ ಕೇಳಿ
ಕುಪಿತಗೊಳ್ವ ಎಲೆ ಮನವೆ
ಸಜ್ಜನರ ಸಿಹಿನುಡಿಗೆ ಪಾಕವೀವೆ,
ಬೆಂಬತ್ತಿದಾ ಮಿಥ್ಯವಾಗದಿರಲೇಕೆ ಪಥ್ಯ
ನಿಂತ ನೀರೊಳೆ ತಾನು ಉಬ್ಬಿಸೇಳಿಸಿ ಅಲೆಯ
ಅಲೆಅಲೆಗೂ ಅಂಟಿಸಿತೋ ನೋಡ್ ಸತ್ಯ ತಾ ನಿತ್ಯ,
ನಖಸಿಖದ ಮುಗಿಲೇರೊ ನಾನೇನೆ ಹೆಮ್ಮರವು
ನೀ ಬರಿಯ ತೃಣ ಕಾಣೋ, ಎನ್ನ ತಬ್ಬಿ ಬೆಳೆದ
ಪೊಳ್ಳು ಜಗದೊಳಗೀಗ ನಿನ್ನದೇನಾರ್ಭಟ......?
...........ರಾಶೇಕ್ರ
ಅಲ್ಲವೇ ಮತ್ತೆ ನಿಮ್ಮ ಕಡೆಯ ಸಾಲು ಬಿಚ್ಚಿಡುವುದು ಬ್ರಹ್ಮಾಂಡ...
ReplyDelete