ಗೆದ್ದೆನೆಂದು ಬೀಗುತ್ತೇನೆ
ಉದ್ದುದ್ದ ಹಾಸಿಕೊಂಡ ಗದ್ದೆ ತೆವರಿಗಳ ಮೇಲೆ
ಎದುರೆದುರಾಗಿ ಹೆಜ್ಜೆ ಇಟ್ಟು
ಅಂಚು ತಲುಪಿದಾಗಲ್ಲೊಂದು ಕಡ್ಡಿ ನೆಟ್ಟು
ಹರಿದ ಬಟ್ಟೆಯ ಬಾವುಟ ಹಾರಿಸಿ
ಒಲೆಗೆ ಸೌದೆ ತುರುಕುವಾಗ ಬೆಳಕಿಗೆ
ಕಪ್ಪು ಮುಖ ಚಿನ್ನದ ಬಣ್ಣವಾದುದ ಕಂಡು
ಹಲ್ಲು ಬಿಟ್ಟುಕೊಂಡು
ಹಳೆ ಡೈರಿಯೊಳಗೆ ಗುರುತಿಗಿಟ್ಟ ದಾರ ತೆಗೆದು
ಹೊಸ ಹೊಸ ಗಾಂಧೀ ಚರಕದಲಿ ನೇಯ್ದಂತೆ
ನೇಯ್ದ ಕನಸುಗಳನ್ನು ನೀಲಿ ಶಾಯಿಯಲಿ ಕಟ್ಟಿಡುವಾಗ
ಕಾವ್ಯ ಕೃಷಿಯೊಳಗೆ ಪರ್ಯಾಯ ಬೆಳೆಯು
ಹುಲುಸಾಗಿ ಬೆಳೆದು ಫಲವನಿತ್ತುವ ಹೊತ್ತಿನಲಿ
ಎರೆದಿದ್ದ ಪುಸ್ತಕದ ಗೊಬ್ಬರಗಳ ಪಟ್ಟಿಮಾಡಿ.
........ರಾಶೇಕ್ರ
No comments:
Post a Comment