ನಾಳೆ ಮದುವೆ
ನನ್ನಿಷ್ಟದ ಮಲ್ಲಿಗೆಯ ಮೇಲೆ ಮಲಗಿದ್ದೇನೆ
ಗೊತ್ತಿದೆಯಾ ನಾ ಎಲ್ಲಿದ್ದೇನೆ
ಬಟ್ಟೆ ಕಳಚಿಕೊಂಡು
ಅರಳಿ ನರಳಿ ನನ್ನನು ನಾ ಬಾಡಿಸಿಕೊಂಡು
ಇವನು, ಇವನ ಮನೆಯಲ್ಲಿ ನಾಳೆಯ ಗಂಡನಲ್ಲದ
ನಿನ್ನೆಯವ'ನಲ್ಲ'ದ ಇವನದೇ ಕಿರುಮನೆಯ
ಕೋಣೆಯ ಕತ್ತಲಲ್ಲಿ ಕಿಟಕಿಯ ಬೆಳಕಿಗೆ ಮುಖಮಾಡಿ
ನರಗಳಲುಂಟಾದ ಕಂಪನ ಹೂವೆದೆಗೆ ಇರಿದರೂ
ಬಳೆಯ ಸದ್ದು ನೆನಪುಗಳನಿತ್ತರೂ
ಕನಸುಗಳ ಹೊತ್ತರೂ ಈಗದೆನಗೆ ಎಣಿಕೆಗಿಲ್ಲ ಥೂ ಬಿಸಾಕಿ
ಮಣ್ಣು ಸೇರುವೆನಲ್ಲ ಒಂದು ದಿನ ಉಣ್ಣಲಿ ಬಿಡಿ
ಪಾಪ ಇವನೂ ಅವನೂ ತಮ್ಮಿಷ್ಟಕ್ಕೆ
ಬೆಣ್ಣೆ ಮೈನ ಮುಳ್ಳು ಗಡ್ಡದಲಿ ಚುಚ್ಚಿ ಹಿತದ ಘಾಸಿಮಾಡಿ
ಇದರದ್ದಲ್ಲ ಚಿಂತೆ ಅಕ್ಕ ಬಳೆ ಅಂಗಡಿಯ ದಾರಿ ಕಾಣದೆ
ಅಲ್ಲೆ ನಿಂತಿದ್ದಾಳೆ,
ಚಪ್ಪರ ಏರಿಸಿಕೊಂಡು ಅಪ್ಪ ಅಂಗಳದಲಿ
ಕುಕ್ಕರುಗಾಲಿನಲಿ ನನ್ನನ್ನೇ ಕಾದಿದ್ದಾನೆ......
........ರಾಶೇಕ್ರ
ನನ್ನಿಷ್ಟದ ಮಲ್ಲಿಗೆಯ ಮೇಲೆ ಮಲಗಿದ್ದೇನೆ
ಗೊತ್ತಿದೆಯಾ ನಾ ಎಲ್ಲಿದ್ದೇನೆ
ಬಟ್ಟೆ ಕಳಚಿಕೊಂಡು
ಅರಳಿ ನರಳಿ ನನ್ನನು ನಾ ಬಾಡಿಸಿಕೊಂಡು
ಇವನು, ಇವನ ಮನೆಯಲ್ಲಿ ನಾಳೆಯ ಗಂಡನಲ್ಲದ
ನಿನ್ನೆಯವ'ನಲ್ಲ'ದ ಇವನದೇ ಕಿರುಮನೆಯ
ಕೋಣೆಯ ಕತ್ತಲಲ್ಲಿ ಕಿಟಕಿಯ ಬೆಳಕಿಗೆ ಮುಖಮಾಡಿ
ನರಗಳಲುಂಟಾದ ಕಂಪನ ಹೂವೆದೆಗೆ ಇರಿದರೂ
ಬಳೆಯ ಸದ್ದು ನೆನಪುಗಳನಿತ್ತರೂ
ಕನಸುಗಳ ಹೊತ್ತರೂ ಈಗದೆನಗೆ ಎಣಿಕೆಗಿಲ್ಲ ಥೂ ಬಿಸಾಕಿ
ಮಣ್ಣು ಸೇರುವೆನಲ್ಲ ಒಂದು ದಿನ ಉಣ್ಣಲಿ ಬಿಡಿ
ಪಾಪ ಇವನೂ ಅವನೂ ತಮ್ಮಿಷ್ಟಕ್ಕೆ
ಬೆಣ್ಣೆ ಮೈನ ಮುಳ್ಳು ಗಡ್ಡದಲಿ ಚುಚ್ಚಿ ಹಿತದ ಘಾಸಿಮಾಡಿ
ಇದರದ್ದಲ್ಲ ಚಿಂತೆ ಅಕ್ಕ ಬಳೆ ಅಂಗಡಿಯ ದಾರಿ ಕಾಣದೆ
ಅಲ್ಲೆ ನಿಂತಿದ್ದಾಳೆ,
ಚಪ್ಪರ ಏರಿಸಿಕೊಂಡು ಅಪ್ಪ ಅಂಗಳದಲಿ
ಕುಕ್ಕರುಗಾಲಿನಲಿ ನನ್ನನ್ನೇ ಕಾದಿದ್ದಾನೆ......
........ರಾಶೇಕ್ರ
No comments:
Post a Comment