Thursday, 4 July 2013

ಕರ್ಮ

ಸೋತೊಲವಿಗನ ಸಾಲು ಗೆಲ್ಲಲು
ಕಚೇರಿಗಳಿಗೆ ಎಳೆದೊಯ್ದ ಚಪ್ಪಲಿಗಳು
ತಳ್ಳುಗಾಡಿಯ ಕುಸ್ಕಾ
ಅವರಪ್ಪನಿಂದ ವಾರಕ್ಕೆ ಮೂರು ದಿನ
ಅರ್ಧರ್ಧ ಗಂಟೆಯ ಘಾಸಿಗಳಿಂದಾದ
ಮುದ್ದು ಮುಖ, ಅರ್ಧಕ್ಕೆ ತುಂಡರಿಸಿದ
ಗದ್ದಗಳೇ ಕಾರಣೀಭೂತವಾದರು
ಕೋರಿಕೆಗೆ ಉಗಿದು ಅಸಹ್ಯವೆಂದು ಹೊರಟ
ಅವಳ ಸ್ಪೂರ್ತಿಗೇ ಅಗ್ರಸ್ಥಾನ ಅವನ ಜುಳು ಜುಳು
ಎದೆಯೊಳಗೆ.

............ರಾಶೇಕ್ರ

No comments:

Post a Comment