ಕರ್ಮಶೇಷ
ಜೆಲ್ಲಿ ಕಲ್ಲಿನ ಹಾದಿಯಲಿ
ಖಾಲಿ ಎದೆಯ ನಡಿಗೆಗೆ
ಜೋಡಿ ಎತ್ತಿನ ನೆನಪು
ಹುಣಸೆ ಮರದ ದೆವ್ವಕೂ
ಆಲೆಮನೆಯದಕೂ ಗೊತ್ತಿದೆ
ನನ್ನಿಡೀ ವೃತ್ತಾಂತ ಮತ್ತು ರಾದ್ಧಾಂತ
ಕೆಂಪು ದೀಪದ ಹಾದಿಗೆ ತಿರುವುತ್ತಲೇ
ಕುಸಿದುಹೋಗುತ್ತದೆ ಕಾಪಾಡಿಟ್ಟಿದ್ದ
ಪುರುಸತ್ವದ ಗುರುತಾಗಿದ್ದ ಉಬ್ಬೆದೆ
ಒರಟು ಮೀಸೆ ಮೊಣಕೈಗೇರಿದ್ದ ಅಂತ್ರದ ದಾರ
ಹೊಕ್ಕುಳನ್ನೂ ಹೂವಂತಿಟ್ಟುಕೊಂಡಿದ್ದವಳ
ಕೇಶದಲಿರದ ಹೇನು ಹೆಕ್ಕುವಾಗಲೇ
ನೆನಪಾಗುವ ವಾತ್ಸಾಯನನ ಕಾಮಕೇಳಿ
ಸಾಲದ್ದಕ್ಕೆ ಇಪ್ಪತ್ನಾಲ್ಕು ತುಂಬಿತ್ತು ಹೇಳಿ ಕೇಳಿ
ಸೋರಿದ್ದು ದ್ರವ ಜಾರಿದ್ದು ಲಾವಾ
ಅಂಟಿದ್ದದು ಬರೀ ಅಂಟಲ್ಲ
ಕೋಟಿ ಜೀವ ರಾಶಿಗಳ ಇರುವು
ತೇವಕ್ಕೆ ತಣ್ಣಗಾಗದ ಬೇಗೆಗೆ ಬೇಯದ
ಹಾಸಿಗೆಯ ಮೇಲೆ ಹೂ ಮಲ್ಲಿಗೆಯ ತೆವಲು
ಉರುಳಿ ಹೊರಳಿ ಕೆರಳಿದ್ದರ ಫಲವಾಗಿ
ಬಿದ್ದ ಪಿಂಡಕ್ಕೆ ಸೀದಾ ತೊಟ್ಟಿಯ ಹಾದಿ
ಬೂದಿಯೊಳಗೊರಳಾಡುವ ಬೀದಿನಾಯಿಗಳಿಗೆ
ಹೊಟ್ಟೆ ಬಿರಿಯ ಎಳೆ ಮಾಂಸದೂಟ
ಉಪ್ಪು ಖಾರದ ನೆಂಚಿಕೆ
ಅಂಟ್ರಾಣಿ ಬೇಲಿಯ ಮರೆಯಲ್ಲಿದ್ದ
ಪಾಳು ಗೋಡೆಯ ಮೂಲೆಯಲಿ
ಅರಳುತ್ತಿದ್ದವು ಆಗಾಗ ಕೇದಗೆ
ಘಮ ಸೂಸಿದ್ದುದ ನೆನಪಿಸುವ ಅಜ್ಜಿ ಕಥೆಗಳು
ಮುಗಿಯುವ ದಾರಿಗೆ ಬಿರುಸಿನ ಪಯಣ
ಮೈಲಿಗಲ್ಲು ಕಂಡೊಡನೆ ಧಗ್ಗೆನ್ನುವ ಎದೆಗೆ
ತಿರುವುಗಳ ತೀರದ ನಿರೀಕ್ಷೆ, ಅಲ್ಲೆಲ್ಲೋ
ದೂರದ ಅಂಚಿನಲಿ ಹೆಣ್ಣೊಂದರ
ಏಕಾಂತ ನಡಿಗೆಯ ಗೋಚರ
ರಾಶೇಕ್ರ
ಜೆಲ್ಲಿ ಕಲ್ಲಿನ ಹಾದಿಯಲಿ
ಖಾಲಿ ಎದೆಯ ನಡಿಗೆಗೆ
ಜೋಡಿ ಎತ್ತಿನ ನೆನಪು
ಹುಣಸೆ ಮರದ ದೆವ್ವಕೂ
ಆಲೆಮನೆಯದಕೂ ಗೊತ್ತಿದೆ
ನನ್ನಿಡೀ ವೃತ್ತಾಂತ ಮತ್ತು ರಾದ್ಧಾಂತ
ಕೆಂಪು ದೀಪದ ಹಾದಿಗೆ ತಿರುವುತ್ತಲೇ
ಕುಸಿದುಹೋಗುತ್ತದೆ ಕಾಪಾಡಿಟ್ಟಿದ್ದ
ಪುರುಸತ್ವದ ಗುರುತಾಗಿದ್ದ ಉಬ್ಬೆದೆ
ಒರಟು ಮೀಸೆ ಮೊಣಕೈಗೇರಿದ್ದ ಅಂತ್ರದ ದಾರ
ಹೊಕ್ಕುಳನ್ನೂ ಹೂವಂತಿಟ್ಟುಕೊಂಡಿದ್ದವಳ
ಕೇಶದಲಿರದ ಹೇನು ಹೆಕ್ಕುವಾಗಲೇ
ನೆನಪಾಗುವ ವಾತ್ಸಾಯನನ ಕಾಮಕೇಳಿ
ಸಾಲದ್ದಕ್ಕೆ ಇಪ್ಪತ್ನಾಲ್ಕು ತುಂಬಿತ್ತು ಹೇಳಿ ಕೇಳಿ
ಸೋರಿದ್ದು ದ್ರವ ಜಾರಿದ್ದು ಲಾವಾ
ಅಂಟಿದ್ದದು ಬರೀ ಅಂಟಲ್ಲ
ಕೋಟಿ ಜೀವ ರಾಶಿಗಳ ಇರುವು
ತೇವಕ್ಕೆ ತಣ್ಣಗಾಗದ ಬೇಗೆಗೆ ಬೇಯದ
ಹಾಸಿಗೆಯ ಮೇಲೆ ಹೂ ಮಲ್ಲಿಗೆಯ ತೆವಲು
ಉರುಳಿ ಹೊರಳಿ ಕೆರಳಿದ್ದರ ಫಲವಾಗಿ
ಬಿದ್ದ ಪಿಂಡಕ್ಕೆ ಸೀದಾ ತೊಟ್ಟಿಯ ಹಾದಿ
ಬೂದಿಯೊಳಗೊರಳಾಡುವ ಬೀದಿನಾಯಿಗಳಿಗೆ
ಹೊಟ್ಟೆ ಬಿರಿಯ ಎಳೆ ಮಾಂಸದೂಟ
ಉಪ್ಪು ಖಾರದ ನೆಂಚಿಕೆ
ಅಂಟ್ರಾಣಿ ಬೇಲಿಯ ಮರೆಯಲ್ಲಿದ್ದ
ಪಾಳು ಗೋಡೆಯ ಮೂಲೆಯಲಿ
ಅರಳುತ್ತಿದ್ದವು ಆಗಾಗ ಕೇದಗೆ
ಘಮ ಸೂಸಿದ್ದುದ ನೆನಪಿಸುವ ಅಜ್ಜಿ ಕಥೆಗಳು
ಮುಗಿಯುವ ದಾರಿಗೆ ಬಿರುಸಿನ ಪಯಣ
ಮೈಲಿಗಲ್ಲು ಕಂಡೊಡನೆ ಧಗ್ಗೆನ್ನುವ ಎದೆಗೆ
ತಿರುವುಗಳ ತೀರದ ನಿರೀಕ್ಷೆ, ಅಲ್ಲೆಲ್ಲೋ
ದೂರದ ಅಂಚಿನಲಿ ಹೆಣ್ಣೊಂದರ
ಏಕಾಂತ ನಡಿಗೆಯ ಗೋಚರ
ರಾಶೇಕ್ರ
ಒಳ ಮನಸ್ಸಿನ ನಿಜಾವರಣ ಗೆಳೆಯ ನಿಮ್ಮ ಈ ಕವನದಲ್ಲಿ.
ReplyDelete