ಇದೆ ನಮ್ಮ ಹಳ್ಳಿ
ಇದು ನಮ್ಮ ಹಳ್ಳಿ ಗೇಟನ್ನು ತಳ್ಳಿ
ಬಾಬಾರೊ ಅಯ್ಯ ಒಳಗೆ
ಎತ್ತದಿರು ತಲೆಯ ಕಟ್ಟುವರು ಕಥೆಯ
ಕೆಡುವಾರು ಕಾಣೊ ಬಲೆಗೆ
ನಡಿಬೇಕು ನೇರ ಇದು ಜೆಲ್ಲಿ ರೋಡು
ಮುರಿದೀತು ಬೆರಳ ಮೂಳೆ
ಗುಂಪೊಳಗೆ ಮೌನ ಓದುವೆನು ಕವನ
ಸರಿಹೋಯ್ತಾರಿವತು ನಾಳೆ
ಹತ್ತಾರು ವರುಷ ಬಿಟ್ಟೇನ ಬಂದ್ರೆ
ಇಡುತಾರೊ ಭಗ್ನಿಗೂಟ
ಘಟಿಸಿದ್ದೆ ನೆನೆದು ಪುನ ಪುನಃ ಕುದಿದು
ಕಾಯ್ತಾರೊ ಸಾಯೊಗಂಟ
ಅರಳಿಮರದ ಕೆಳಗೆ ಕಟ್ಟವರೆ ಕಟ್ಟೆ
ಮರೆತವರೆ ಎಲ್ಲ ಕರ್ಮ
ಅಯ್ಯಯ್ಯೊ ಅಗೊಳೊ ನಗಬೇಡ ಕಾಣೊ
ಸುಲಿದಾರು ನಿನ್ನ ಚರ್ಮ
ನೋಡಲ್ಲಿ ಮೋಲ್ಡು ಮೊದಲಿತ್ತು ಶೆಡ್ಡು
ಅದಕಿಂತ ಮೊದಲು ಗುಡ್ಡ
ಇಲ್ನೋಡು ಇಲ್ಲಿ ಎಡಪಕ್ಕದಲ್ಲಿ
ಹುಟ್ಕೊಂತು ಬೇಲಿ ಅಡ್ಡ
ಅಗೊ ಅದೋ ನಲ್ಲಿ ಕಾರ್ನರ್ರಿನಲ್ಲಿ
ನೀರಿಲ್ಲ ಇಲ್ಲಿಗಂಟ
ಮೊನ್ಮೊನ್ನೆ ತಾನೆ ಆಪ್ರಾಣೆ ಹೋಯ್ತು
ಅಂತಿದ್ದ ನಮ್ಮ ಎಂಕ್ಟ
ಇಡಿ ಊರ ಒಳಗೆ ವೈಷಮ್ಯ ಬೆಳೆದು
ಯಾವಾಗ್ಲು ಜಗ್ಳ ಕಾಣು
ಅವ್ನು ಈರಭದ್ರ ಅದೆ ಶಿಳ್ಳೆಕ್ಯಾತ
ಹಾಕೊಂಡ ನೆನ್ನೆ ನೇಣು.
ರಾಶೇಕ್ರ
ನನ್ನ ಹಳ್ಳಿ ನೆನಪಾಯಿತು.
ReplyDelete