ತುಂಬಿದ ಬಾನು
ನಿನ್ನೆದೆ ಜೈಲಿನ ಸರಳಿಗೊ ಕಂಬಿಗೊ
ಬಣ್ಣವ ಬಳಿವ ಕೆಲಸವ ಕೊಟ್ಟರೆ
ಸಂಬಳವನ್ನೆ ಬಯಸೆನು ನಾನು
ದಬ್ಬಾಳಿಕೆಯನು ಮಾಡುವಿಯಾದರೆ
ಇರದಿರೊ ನನ್ನೊಳು ನಿನ್ನನು ಹುಡುಕುತ
ತಿಂಗಳ ಬೆಳಕಲಿ ತಣ್ಣಗೆ ಇರು ನೀ
ಕೆಮ್ಮುವ ಸದ್ದಿಗೆ ಹೆದರುವಿಯಾದರೆ
ಸಣ್ಣಗೆ ನಗುವೆ ಸಂಭಾಳಿಸು ನೀ
ಹಾರಲು ರೆಕ್ಕೆಯ ಕಟ್ಟುವ ಸಮಯದಿ
ಬುಳ್ಳನೆ ಎದ್ದ ಸಡಗರವಾಗು
ಹೊಂಗೆಯ ನೆರಳಲಿ ಡೇರೆಯ ಹೂಡುವೆ
ಇರುಳಲಿ ಉರಿವ ದೀಪವೆ ಆಗು
ಕಾಣದ ಕಡಲಿನ ತೆರೆಯಲಿ ತೇಲಿ
ಅಲೆಅಲೆಯಲ್ಲೂ ಉಕ್ಕುವ ಗೆಲುವೇ
ಕಂಬನಿ ಕೆಡವುವ ಹೊತ್ತಲಿ ನನ್ನ
ಎದೆಗಪ್ಪದೆಯೇ ಇರುವೆಯ ಚೆಲುವೆ
ರಾಶೇಕ್ರ
No comments:
Post a Comment