ಬಾನಿನಗಲ ತವರಿದೆ
ನಡೆದು ನಡೆದೆ ಸಾಗಬೇಕೆ
ದೂರದೂರಿನೊಡಲಿಗೆ
ಶ್ಯಾನೆದಿನದ ಅಂತರದಲಿಗೋ-
ಹೊರಟೆ ತವರಿಗೆ
ನಾಕು ದಿನಕೆ ಅಂತ ಹೇಳಿ
ಬಂದೆ ನನ್ನ ಗಂಡಗೆ
ಇನ್ನು ದೂರ ನಡೆಯಬೇಕು
ಅಲ್ಪ ಕಾಲ ತೃಪ್ತಿಗೆ
ಹೆಕ್ಕಿ ಹೆಕ್ಕಿ ತಿಂದೆ ನೆನಪ
ಸಪ್ಪೆ ಕಡಲಿನಾಳದೇ
ಬಿಕ್ಕಿ ಬಿಕ್ಕಿ ಅಳಲು ನಾನು
ಹೊಳೆವ ಕಣ್ಣಿಗೊಪ್ಪದೇ
ಯಾಕೊ ಏನೊ ತಡೆಯಲಿಲ್ಲ
ಕಳೆದಬಾರಿಯಂತೆಯೇ
ಇಸ್ಟು ದಿವಸ ಹೇಗೊ ನನ್ನ
ಕಾಡುತಿದ್ದ ಚಿಂತೆಯೇ
ಸಾಕು ಬರೆನು ಕರೆಯಬೇಡ
ಹಿಂದೆ ಸರಿದು ಎಂದಿಗೂ
ಸೆಳೆಯುತಿದೆಯೋ ಅವ್ವನೆದೆಯು
ಮೂರ್ತಪ್ರೇಮದಂಚಿಗೂ
ರಾಶೇಕ್ರ
ನಡೆದು ನಡೆದೆ ಸಾಗಬೇಕೆ
ದೂರದೂರಿನೊಡಲಿಗೆ
ಶ್ಯಾನೆದಿನದ ಅಂತರದಲಿಗೋ-
ಹೊರಟೆ ತವರಿಗೆ
ನಾಕು ದಿನಕೆ ಅಂತ ಹೇಳಿ
ಬಂದೆ ನನ್ನ ಗಂಡಗೆ
ಇನ್ನು ದೂರ ನಡೆಯಬೇಕು
ಅಲ್ಪ ಕಾಲ ತೃಪ್ತಿಗೆ
ಹೆಕ್ಕಿ ಹೆಕ್ಕಿ ತಿಂದೆ ನೆನಪ
ಸಪ್ಪೆ ಕಡಲಿನಾಳದೇ
ಬಿಕ್ಕಿ ಬಿಕ್ಕಿ ಅಳಲು ನಾನು
ಹೊಳೆವ ಕಣ್ಣಿಗೊಪ್ಪದೇ
ಯಾಕೊ ಏನೊ ತಡೆಯಲಿಲ್ಲ
ಕಳೆದಬಾರಿಯಂತೆಯೇ
ಇಸ್ಟು ದಿವಸ ಹೇಗೊ ನನ್ನ
ಕಾಡುತಿದ್ದ ಚಿಂತೆಯೇ
ಸಾಕು ಬರೆನು ಕರೆಯಬೇಡ
ಹಿಂದೆ ಸರಿದು ಎಂದಿಗೂ
ಸೆಳೆಯುತಿದೆಯೋ ಅವ್ವನೆದೆಯು
ಮೂರ್ತಪ್ರೇಮದಂಚಿಗೂ
ರಾಶೇಕ್ರ
"ತವರು" ಎಂದ ಕೂಡಲೇ ಯಾಕೋ ನಿಮ್ಮ ಕವನದ ಆಚೆಗೆ ಒಂದು ಅಭಿಪ್ರಾಯ ಬರೆಯೋಣ ಅನಿಸಿತು ರಾಶೇಕ್ರ.
ReplyDeleteತವರು ಬರೀ ಹೆಣ್ಣ ಮಕ್ಕಳ ಪಾಲಿಗೇ ಎಂದು ಅನ್ವರ್ಥವಾಗಿಸಲೇಬಾರದು. ಉದಾಹರಣೆಗೆ ನನ್ನ ಹಳ್ಳಿ ಬಿಟ್ಟು ನನ್ನ ಅಣ್ಣ ಬೆಂಗಳೂರು ಸೇರಿಕೊಂಡರು. ಈಗ ನನಗೆ ಹಳ್ಳಿ ಬೇರುಗಳೇ ಇಲ್ಲದೇ "ತವರು" ಕಳೆದುಕೊಂಡ ಖೇದವಿದೆ!
http://badari-poems.blogspot.com