ಆಗೇ ಹೋಯ್ತದು ಹಾಡು ಹಗಲೇ
ಇಪ್ಪತ್ತೊಂದರ ಮೇಲೆ ಅತ್ಯಾಚಾರವೆಂದರದಕೆ
ಸರಿಬರದು, ವ್ಯಾಕರಣವನ್ನಾದರೂ
ಕೊಂಕಿಸಿ ಹತ್ಯಾಚಾರವೆಂದುಬಿಡುವೆ
ಮಾಡಿದವರವರು ವೇಶ್ಯೆಗೆ
ಹುಟ್ಟಿದ್ದಿರಬೇಕೆಂದ ಮೇಲವರ ಹೆತ್ತವಳ
ಸೂಳೆ ಎಂದರೇನು ತಪ್ಪಿವರ
ಸೂಳೆಮಕ್ಕಳೆಂದರೇನು
ಹೃದಯವಿಲ್ಲದವರು ಇಲ್ಲವೇ
ಪ್ರಾಣಿವೀರ್ಯಕೆ ಬಿದ್ದವರಿರಬೇಕು ಬಹುಶಃ,
ಸುತ್ತ ಸರಪಳಿ ನಿಂತು ನೋಡುವರಲ್ಲಿ
ಶೇಕಡಾ ಹದಿನೈದು ಪರ್ಸೆಂಟು
ಮುದುಕರಿರಬೇಕು, ಆಯುಷ್ಯ ಪೂರಾ
ಇಂಥದೇ ಕಂಡಿದ್ದಿರಬೇಕು, ಗಾಂಧಿ ಕಾಲದವರು
ಈಗ ಗಾಂಧಿಯಾಗಲಿದ್ದಾರೇನೊ ಬಹುಶಃ,
ಒಂದಿಷ್ಟು ಮಂದಿ ಹರೆಯದವರು
ಹುಟ್ಟಿದಾಗಿಂದ ಬೆತ್ತಲ ಕಾಣದವರು
ಈ ನೆಪದಿಯಾದರೂ ಸವಿದುಬಿಡುವೆಂಬಿವರ
ಮುಖ ಹಿಚುಕಿಕೊಂಡಿರಬಹುದು, ಹನಿಹನಿ
ರಕ್ತ ಸದ್ದು ಮಾಡಿ ಹರಿವಾಗೇನನ್ನೋ ಹುಡುಕುತ್ತಿದೆ
ಹೆಪ್ಪುಗಟ್ಟುತಿದೆ ಬಹುಶಃ
ಮತ್ತೊಂದಿಷ್ಟು ಹೆಂಗಳೆಯರಿಗೆ ಎದೆ ಢವಢವ
ಸೆರಗು ಮೂತಿ ಮೇಲೇರಿಸಿ ಎಡಪಕ್ಕೆಗೆ
ತಿರುವುತ್ತಾರೊಂದಷ್ಟು ಜನ
ಎದೆಬಡಿದು ದೂರ ಹೋಗುತ್ತಾರೆ...
ಯಾವನೋ ಒಬ್ಬ ಬರ್ಬರದೊಳಗೂ
ಓಡುವವರಡಿಯ ಹೈ ಹೀಲ್ಸ್ ಚಪ್ಪಲಿಯ
ಬ್ಯಾಲೆನ್ಸಿಗೆ ಮೆಚ್ಚಿ ನುಡಿದಿದ್ದಾನೆ
ಕುಣಿವೆದೆ ಮೇಲೆ ಕಣ್ಣವಗೆ ಬಹುಶಃ,
ಹದಿನೈದರವನೊಬ್ಬ ಹೊಕ್ಕವನೆ
ಗುಂಪೊಳಗವನ ಭಾವ ಪಾಪ ಎಳೆಯದಿನ್ನೂ
ಬಲಿಯಲಿಚ್ಚಿಸುತಿದೆ
ಹರೆಯ ಅವನನ್ನಾಗಲೇ ಹೊಕ್ಕಿ ತಿನ್ನುತಿದೆ
ತೊಟ್ಟಿಕ್ಕದೊಂದು ಹನಿಯೂ ವೀರ್ಯ
ಕ್ರೌರ್ಯದೊಳು ಚೆಡ್ಡಿಯೊಳು ಬಹುಶಃ,
ನಾನೇನೊ ಬರೆಯುತ್ತೇನೆ ನಾಕೈದು ಸಾಲು
ಇಲ್ಲಿ ಫರ್ಲಾಂಗು ದೂರದಲಿ ಕೂತು
ನೆಟ್ಟ ದೃಷ್ಟಿಗೆ ಕಂಡದ್ದೊಂದೆರಡು ಕೊಡೆ
ಬಣ್ಣದವು ಗುಂಪೊಳಗೆ ಮಿರಮಿರನೆ
ಬಿಸಿಲಿಗೆದರಿ, ಸುಮ್ಮನಾಗುತ್ತೇನೆ ನಮ್ಮೊಳಗೆ
ಮಾಮೂಲಿಯವೀ ಗುಂಪುಗಳು ಛೇ ಬಿಡಿ ನನಗೇಕೆಂದು ಬಹುಶಃ
ಗೊತ್ತೇನಲ್ಲಿ ಹರಿದುದದು ಜೀವಂತ ರಕ್ತ
ಹರಣವಾಗುತ್ತಿದ್ದುದದು ಕನ್ಯತ್ವ, ಶೀಲ
ಕಿತ್ತು ಹೋಗಿದ್ದು ಟೈಟು ಜೀನ್ಸಿನ ಬಟನು
ಹರಿದಿದ್ದವಳ ಲೂಜು ಶರ್ಟು ಬಹುಶಃ
ರಾಶೇಕ್ರ
ಇಪ್ಪತ್ತೊಂದರ ಮೇಲೆ ಅತ್ಯಾಚಾರವೆಂದರದಕೆ
ಸರಿಬರದು, ವ್ಯಾಕರಣವನ್ನಾದರೂ
ಕೊಂಕಿಸಿ ಹತ್ಯಾಚಾರವೆಂದುಬಿಡುವೆ
ಮಾಡಿದವರವರು ವೇಶ್ಯೆಗೆ
ಹುಟ್ಟಿದ್ದಿರಬೇಕೆಂದ ಮೇಲವರ ಹೆತ್ತವಳ
ಸೂಳೆ ಎಂದರೇನು ತಪ್ಪಿವರ
ಸೂಳೆಮಕ್ಕಳೆಂದರೇನು
ಹೃದಯವಿಲ್ಲದವರು ಇಲ್ಲವೇ
ಪ್ರಾಣಿವೀರ್ಯಕೆ ಬಿದ್ದವರಿರಬೇಕು ಬಹುಶಃ,
ಸುತ್ತ ಸರಪಳಿ ನಿಂತು ನೋಡುವರಲ್ಲಿ
ಶೇಕಡಾ ಹದಿನೈದು ಪರ್ಸೆಂಟು
ಮುದುಕರಿರಬೇಕು, ಆಯುಷ್ಯ ಪೂರಾ
ಇಂಥದೇ ಕಂಡಿದ್ದಿರಬೇಕು, ಗಾಂಧಿ ಕಾಲದವರು
ಈಗ ಗಾಂಧಿಯಾಗಲಿದ್ದಾರೇನೊ ಬಹುಶಃ,
ಒಂದಿಷ್ಟು ಮಂದಿ ಹರೆಯದವರು
ಹುಟ್ಟಿದಾಗಿಂದ ಬೆತ್ತಲ ಕಾಣದವರು
ಈ ನೆಪದಿಯಾದರೂ ಸವಿದುಬಿಡುವೆಂಬಿವರ
ಮುಖ ಹಿಚುಕಿಕೊಂಡಿರಬಹುದು, ಹನಿಹನಿ
ರಕ್ತ ಸದ್ದು ಮಾಡಿ ಹರಿವಾಗೇನನ್ನೋ ಹುಡುಕುತ್ತಿದೆ
ಹೆಪ್ಪುಗಟ್ಟುತಿದೆ ಬಹುಶಃ
ಮತ್ತೊಂದಿಷ್ಟು ಹೆಂಗಳೆಯರಿಗೆ ಎದೆ ಢವಢವ
ಸೆರಗು ಮೂತಿ ಮೇಲೇರಿಸಿ ಎಡಪಕ್ಕೆಗೆ
ತಿರುವುತ್ತಾರೊಂದಷ್ಟು ಜನ
ಎದೆಬಡಿದು ದೂರ ಹೋಗುತ್ತಾರೆ...
ಯಾವನೋ ಒಬ್ಬ ಬರ್ಬರದೊಳಗೂ
ಓಡುವವರಡಿಯ ಹೈ ಹೀಲ್ಸ್ ಚಪ್ಪಲಿಯ
ಬ್ಯಾಲೆನ್ಸಿಗೆ ಮೆಚ್ಚಿ ನುಡಿದಿದ್ದಾನೆ
ಕುಣಿವೆದೆ ಮೇಲೆ ಕಣ್ಣವಗೆ ಬಹುಶಃ,
ಹದಿನೈದರವನೊಬ್ಬ ಹೊಕ್ಕವನೆ
ಗುಂಪೊಳಗವನ ಭಾವ ಪಾಪ ಎಳೆಯದಿನ್ನೂ
ಬಲಿಯಲಿಚ್ಚಿಸುತಿದೆ
ಹರೆಯ ಅವನನ್ನಾಗಲೇ ಹೊಕ್ಕಿ ತಿನ್ನುತಿದೆ
ತೊಟ್ಟಿಕ್ಕದೊಂದು ಹನಿಯೂ ವೀರ್ಯ
ಕ್ರೌರ್ಯದೊಳು ಚೆಡ್ಡಿಯೊಳು ಬಹುಶಃ,
ನಾನೇನೊ ಬರೆಯುತ್ತೇನೆ ನಾಕೈದು ಸಾಲು
ಇಲ್ಲಿ ಫರ್ಲಾಂಗು ದೂರದಲಿ ಕೂತು
ನೆಟ್ಟ ದೃಷ್ಟಿಗೆ ಕಂಡದ್ದೊಂದೆರಡು ಕೊಡೆ
ಬಣ್ಣದವು ಗುಂಪೊಳಗೆ ಮಿರಮಿರನೆ
ಬಿಸಿಲಿಗೆದರಿ, ಸುಮ್ಮನಾಗುತ್ತೇನೆ ನಮ್ಮೊಳಗೆ
ಮಾಮೂಲಿಯವೀ ಗುಂಪುಗಳು ಛೇ ಬಿಡಿ ನನಗೇಕೆಂದು ಬಹುಶಃ
ಗೊತ್ತೇನಲ್ಲಿ ಹರಿದುದದು ಜೀವಂತ ರಕ್ತ
ಹರಣವಾಗುತ್ತಿದ್ದುದದು ಕನ್ಯತ್ವ, ಶೀಲ
ಕಿತ್ತು ಹೋಗಿದ್ದು ಟೈಟು ಜೀನ್ಸಿನ ಬಟನು
ಹರಿದಿದ್ದವಳ ಲೂಜು ಶರ್ಟು ಬಹುಶಃ
ರಾಶೇಕ್ರ
ಮನಸ್ಸು ಮ್ಲಾನವಾಯಿತು. ಗೆಳೆಯ ಮನಸ್ಸು ಮ್ಲಾನವಾಯಿತು.
ReplyDelete