ದೇವದಾಸಿ
ಎಲ್ಲರಂತಲ್ಲ ನಾನು
ಬಿಚ್ಚಿಟ್ಟಿದ್ದರೂ ಮುಚ್ಚಿಟ್ಟಲ್ಲ ಏನನ್ನೂ
ಮರೆತಿಲ್ಲ ಏನನ್ನೂ ಅಪ್ಪನ ಕುಡಿತ
ಅಣ್ಣನ ಹೊಡೆತ ಅವ್ವನ ಎದೆ ಬಡಿತ
ಕೊರಳು ಬಿಗಿದವನ ಕಾ್ಲತುಳಿತ
ನಗುವೆ ನಾಚುವೆ ಅಳುವೆ ಆಗಾಗ ಬೇಯುವೆ
ಊರ ಒಡೆಯನ ಎದುರು ಕಾ್ಲ್ಗೆಜ್ಜೆ ತೊಡುವೆ
ತುಂಟ ಪುರೋಹಿತನಿಗೆ ಹೊತ್ತಿಲ್ಲ ಗೊತ್ತಿಲ್ಲ
ಬರುತ್ತಲೇ ಸೆರಗೆಳೆದು ಬೀಳುವಾಗ ಮಲ್ಲಿಗೆಗೆ ಘಮವಿಲ್ಲ
ಈಗಿಲ್ಲ ವಾರಕ್ಕೊಮ್ಮೆ ಇನ್ನೂರು ಕೊಡುತ್ತಿದ್ದ ಹಮಾಲಿ
ಮರೆತಿದ್ದೇನೆ ತಾಳಿಯನು ಕಪಾಟಿನಲಿ
ನನ್ನದೇ ಗುಮಾನಿ ಊರ ಹ್ಐಕಳ ಪೋಲಿ ಚರ್ಚೆಯಲಿ
ಮನ್ನಿಸಿ ಪತಿವ್ರತೆಯರು ತಪ್ಪಿದ್ದರೆ ನಾಇಟ್ಟ ಚುಕ್ಕಿ ರಂಗೋಲಿ
........ರಾಶೇಕ್ರ
No comments:
Post a Comment