ಮರ
ನಾವು ನಾವೆನ್ನುವಿರಲ್ಲ
ನಿಮಗೆ ನಿಮ್ಮದೆ ಕಾನೂನು
ಈ ನೆಲಕೆ ನಾವು ಆಮೇಲೆ ನೀವು ಅರಿವಿಲ್ಲವೇನು
ಚಾಚಿದವುಗಳ ಹಿಡಿದು ವಾಲಾಡುವವರು
ನೀವು ನಾವಿಲ್ಲದೆ ಇರದವರು
ಇದ್ದರೂ ನಿಮಗೆ ನೀವೆ ಆಗದವರು
ನಮಗೆ ನಮ್ಮದೇ ಲೋಕ ಬರೀ ಮಳೆಗಾಳಿ
ನಿಮ್ಮದು ಕ್ರುತಕ ಸಾಫ್ಟ್ವೇರುಗಳ ಸುಳಿ
ಅದರೊಳಗೀಜಲು ಆಗದುದ
ಕಂಡು ನಮ್ಮ ಕಣ್ ಪಿಳಿಪಿಳಿ
ಮುಳುಗುವಾಗೊಂದೆಸಲ ಬಿಡುವೆವು
ಅದ ಹಿಡಿದು ನೀವು ಗೆಲ್ಲಿ
ಗೆದ್ದು ಗೆದ್ದೆವು ಎಂದುಕೊಳ್ಳಿ
ಅಲ್ಲಿ ನಿಮ್ಮವರ ಮಡಿಲಲ್ಲಿ
.........ರಾಶೇಕ್ರ
No comments:
Post a Comment