ಬರಹ
ಹೀಗೊಂದು ಕತ್ತಲಾಗುವ ಹೊತ್ತಲ್ಲಿ ಒಂದು ನೋಟ್ ಬುಕ್ಕಿನ ಮಧ್ಯದ ಪೇಜ್ ಕಿತ್ತು ಅಷ್ಟೇನೂ ದಿಬಾರಿಯಲ್ಲದ(ಚೀಪಾದ) ಚೂಪಾದ ಪೆನ್ನಿಡಿದು ಬರೆಯಬೇಕೆಂದು ಕೂತೆ, ಬರಹವೆಂಬ ತಲೆ ಬರಹ ಕೊಟ್ಟು,
ನನ್ನಲ್ಲಿ ಗೊಂದಲ ಶುರುವಾಯಿತು ಏನು ಬರೆಯಲಿ? ಯಾರ ಕುರಿತು ಬರೆಯಲಿ? ನನ್ನ ಬಗ್ಗೆ? ಬಿಡಿ ನನ್ನಲ್ಲೇನೂ ಅಂಥ ವಿಶೇಷತೆ ಇನ್ನೂ ನಾ ಕಂಡಿಲ್ಲ, ಅಕಸ್ಮಾತ್ ಕಂಡಿದ್ದರೂ ಅದನಿಲ್ಲಿ ಬರೆದು ನಿಮ್ಮ ಅಸಮಾಧಾನಕ್ಕೊಳಗಾಗುವುದು ಬೇಡವೆಂದು ಸುಮ್ಮನಾದೆ,
ಇನ್ನಾರ ಕುರಿತು ಬರೆಯಲಿ? ಗೆಳೆಯರನ್ನು? ಗೆಳತಿಯರನ್ನು? ಅಥವಾ ಪ್ರೇಯಸಿಯರನ್ನು? ಛೇ ಪ್ರೇಯಸಿಯರು, ಬೇಡ ಅವರನ್ನಲ್ಲೆ ದೂರದಲ್ಲೆ ಇಟ್ಟಿದ್ದೇನೆ, ಎಷ್ಟು ದೂರ ಎನ್ನುವುದಾದರೆ ಅದೋ ಅಲ್ಲಿ ಕಾಣುವುದಲ್ಲ ದಿಗಂತ ಅಲ್ಲಿ, ನೆನಪುಗಳ ಊರಲ್ಲಿ,
ನೆನಪು ಏನಿದು ನೆನಪು? ಯಾಕೆ ನೆನಪು? ಯಾರ ನೆನಪು? ಇಗೊಳ್ಳಿ ಈ ನೆನಪೆಂಬ ಪದವೇ ವಿಚಿತ್ರವಾಗಿ ಕಾಣುತ್ತಿದೆ. ಇದಕ್ಕೆ ನೆನಪೆಂಬ ಹೆಸರಿಟ್ಟವರಾರು? ಪೂರ್ವಜರೋ ಆದಿಮಾನವರೋ ಇಟ್ಟಿರುತ್ತಾರೆ, ನೆನಪು ಬದಲಿಗೆ ಬೇರೇನಾದರೂ ಹೆಸರಿಗಳಿವಿಯೆ? ಏನವು? ನೆ_ನ_ಪು ನೆನ್ನೆಗಳ ನಮ್ಮ ಪುಂಡಾಟಗಳೇ? ಯೋಚಿಸಿದೆ,,,,, ಇಲ್ಲ ಏನೂ ಹೊಳೆಯಲಿಲ್ಲ. ಬಿಟ್ಟು ಬಿಡುತ್ತಿದ್ದೇನೆ ಇದನ್ನಿಲ್ಲಿಗೇ, ನನ್ನನ್ನು ಚಂಚಲವೆಂದು ತಿಳಿಯಿರಿ ಅಥವಾ ಈ ಅಗ್ಗದ ಪೆನ್ನನ್ನು.....!
ಸುಮ್ಮನೆ ಖಾಲಿ ಕುಳಿತಿರುವುದರ ಏನನ್ನಾದರೂ ಬರೆಯಲೇಬೇಕಲ್ಲ,
ಓ ಜಾತಿ, ಜಾತಿಗೆ ಜಾತಿ ಎಂದವರಾರೆಂದು ಮೊದಲಿನಂತೆ ಈಗ ಚರ್ಚೆಯಾಗಲೀ ವಿಮರ್ಶೆಯಾಗಲೀ ಬೇಡ. ಸುಮ್ಮನೇ ಒಂದಷ್ಟು ಬರೆಯುವೆ,
ಜಾತಿ ಜಾತಿಯೊಳಗೆ ಜಾತಿ(ಉಪಜಾತಿ), ಉಪಜಾತಿಗಳೊಳಗೆ ಇನ್ನೊಂದಷ್ಟು ಜಾತಿಗಳು ಹೀಗೆ ಹತ್ತು ಹಲವು ಜಾತಿಗಳು. ನನಗಂತೂ ತಿಳಿದಿರುವುದು ಮನುಷ್ಯ ಜಾತಿ ಅಲ್ಲಲ್ಲ ಪ್ರಾಣಿ ಜಾತಿಯೂ ಇದೆ ಹಾಗೇ ಪಕ್ಷಿ ಜಾತಿ, ಮತ್ತು ಕೇಳಿ ತಿಳಿದುಕೊಂಡಂತೆ ಗಂಡು ಜಾತಿ ಮತ್ತು ಹೆಣ್ಣು ಜಾತಿ ಮಗದೊಂದು ಹಿಜಿದಾ ಜಾತಿ. ಇವೆಲ್ಲವೂ ಜಾತಿಯಲ್ಲ ಸ್ರುಷ್ಟಿ ಎನ್ನುವುದಾದರೆ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿ ಜೈನ ಬುದ್ಧ ಅಬ್ಬಬ್ಬಾ ಎಷ್ಟೊಂದು ಜಾತಿಗಳು, ಯಾರಿಗೆ ಪುರುಸೊತ್ತಿತ್ತು ಈ ಜಾತಿಗಳನ್ನೆಲ್ಲ ಜಾರಿಗೆ ತರಲು, ಅನ್ವೇಷಣೆ ಮಾಡಲು, ಯಪ್ಪಾ ಹೀಗೆ ಜಾತಿಗಳು ಉಪಜಾತಿಗಳು ಮತ್ತು ಅದರೊಳಗಿನ ಉಪಉಪ ಜಾತಿಗಳನ್ನು ಅನಾವರಣ ಮಾಡಿದವನು ತುಂಬಾ ಬುದ್ಧವಂತನೇ ಇರಬೇಕು....!
ಬುದ್ಧಿವಂತನೆಂದರೆ ಅಂಥಿಂಥಾ ಬುದ್ದಿವಂತನಲ್ಲಾ ದಡ್ಡ ಬುದ್ಧಿವಂತ, ಮೂರ್ಖ ಬುದ್ಧಿವಂತ, ಅಥವಾ ಮುಟ್ಟಾಳ ಬುದ್ಧಿವಂತ. ಅವನೀಗ ನನಗೆ ಸಿಗಬೇಕಿತ್ತು ಅಪ್ಪಚ್ಚಿ ಮಾಡುತ್ತಿದ್ದೆ, ಆದರೇನು ಮಾಡುವುದು ಅವನು ಗತವೈಭವದಲ್ಲಿ ಅಳಿದು ಹೋಗಿದ್ದಾನೆ, ಕಳೆದು ಹೋಗಿದ್ದರೂ ಬದುಕಿದ್ದಾನೆ.
ಇಲ್ಲಿ ಇನ್ನೊಂದು ವಿಷಯ ಕಾಡುವುದೆಂದರೆ ಅವನು ಮಾಡಿಟ್ಟ ಜಾತಿಯೊಳಗೆ ನೂಕಲ್ಪಟ್ಟವರು ಮತ್ತದೇ ಬುದ್ಧಿವಂತನ ನೀತಿಯನ್ನು ಅನುಸರಿಸಿತ್ತಿರುವುದು, ಇಂಥವರಿರುವಾಗ ಇನ್ನೇನು ಹೇಳುವುದು?
ಮುಕ್ತಾಯವಲ್ಲದ ಮುಕ್ತಾಯವನ್ನು ಕೊಟ್ಟು ಈ ಬರಹವನ್ನು ಇಲ್ಲಿಗೇ ಕೊನೆಗಾಣಿಸುತ್ತಿದ್ದೇನೆ ಸಹಕರಿಸಿ, ಮನ್ನಿಸಿ, ಮತ್ತು ಸ್ವಲ್ಪ ಚಂತಿಸಿ.
........ರಾಶೇಕ್ರ

No comments:
Post a Comment