ಅವಳು
ಹೆತ್ತವರು ಹೊತ್ತವರು
ಬಿಟ್ಟೊರಟವರಾರು ಹೇಳಿದರು ಕೇಳಲಿಲ್ಲ
ಹೀಗೆ ನೀನು ಲೈಟು ಬೆಳಕಿನ ದಾರಿಯಲಿ
ಸೊಂಟ ಬಳುಕಿಸಿ ನಡೆದು
ಮನೆಗಳೊಳಗೆ ಅಡ್ಡ ಗೋಡೆ ಎಬ್ಬಿಸಿದೆ,
ನಿನ್ನ ನೀನೆ ದರ್ಪಣದಲಿ ಕಂಡು
ಅದಕೊಂದಿಷ್ಟು ಕಣ್ಕಪ್ಪು ಲಿಪ್ಸ್ಟಿಕ್ಕು
ನೇಪಾಕಿಕೊಂಡು ಹೊರಟಿದ್ದೀಯ ಎಲ್ಲಿಗೆ ಈಗ
ಅದಾವ ಪುರುಷತ್ವದ ರುಚಿಗೆ,
ಬಿಳಿ ಮೈಗೆ ಕಪ್ಪು ಸೀರೆ ಮ್ಯಾಚಿಂಗು ನಿನಗೆ
ಕಣ್ಣುಬ್ಬ ನಡುವೆ ಹಣೆಬೊಟ್ಟು ಕಾಣುವುದೆ
ಇಲ್ಲ ಬಿಡು ಕಾಣಲೆ ಬೇಕೆಂದೇನಿಲ್ಲ,
ಹೈ ಹೀಲ್ಸ್ ಸದ್ದಿಗೂ
ಪ್ಯಾರಾಗಾನಿನ ಪಟ್ಟಿಗೂ ನಂಟು ಬೆಸೆಯಲೊರಟ
ಅದೆಷ್ಟೋ ಗಾರೆ ಬಳಿವ ಮಂದಿಗೀಗ ಭ್ರಮಾ ನಿರಸನ
ಕಣ್ಣು ಕಣ್ಕಪ್ಪಿನೊಳಗಿನ ಬಿಳಿಗುಡ್ಡೆಗಳನತ್ತಿತ್ತ
ತಿರುಗಿಸಿ, ತುಂಬಿದೆದೆಗಳಿಗೆ ಟೈಟು ರವಿಕೆಯನೇರಿಸಿ
ಕನಸು ಸ್ಖಲನಗಳ ನಕಲಿಗೊಳಿಸುವ ನಿನಗೆ
ಹೂವೆರಚುವ ಹರಸಾಹಸ ಮಾಡಿದ್ದ
ನನಗೀಗ ಎಗ್ಗಿಲ್ಲದ ಮ್ಊನ.
........ರಾಶೇಕ್ರ
ಹೆತ್ತವರು ಹೊತ್ತವರು
ಬಿಟ್ಟೊರಟವರಾರು ಹೇಳಿದರು ಕೇಳಲಿಲ್ಲ
ಹೀಗೆ ನೀನು ಲೈಟು ಬೆಳಕಿನ ದಾರಿಯಲಿ
ಸೊಂಟ ಬಳುಕಿಸಿ ನಡೆದು
ಮನೆಗಳೊಳಗೆ ಅಡ್ಡ ಗೋಡೆ ಎಬ್ಬಿಸಿದೆ,
ನಿನ್ನ ನೀನೆ ದರ್ಪಣದಲಿ ಕಂಡು
ಅದಕೊಂದಿಷ್ಟು ಕಣ್ಕಪ್ಪು ಲಿಪ್ಸ್ಟಿಕ್ಕು
ನೇಪಾಕಿಕೊಂಡು ಹೊರಟಿದ್ದೀಯ ಎಲ್ಲಿಗೆ ಈಗ
ಅದಾವ ಪುರುಷತ್ವದ ರುಚಿಗೆ,
ಬಿಳಿ ಮೈಗೆ ಕಪ್ಪು ಸೀರೆ ಮ್ಯಾಚಿಂಗು ನಿನಗೆ
ಕಣ್ಣುಬ್ಬ ನಡುವೆ ಹಣೆಬೊಟ್ಟು ಕಾಣುವುದೆ
ಇಲ್ಲ ಬಿಡು ಕಾಣಲೆ ಬೇಕೆಂದೇನಿಲ್ಲ,
ಹೈ ಹೀಲ್ಸ್ ಸದ್ದಿಗೂ
ಪ್ಯಾರಾಗಾನಿನ ಪಟ್ಟಿಗೂ ನಂಟು ಬೆಸೆಯಲೊರಟ
ಅದೆಷ್ಟೋ ಗಾರೆ ಬಳಿವ ಮಂದಿಗೀಗ ಭ್ರಮಾ ನಿರಸನ
ಕಣ್ಣು ಕಣ್ಕಪ್ಪಿನೊಳಗಿನ ಬಿಳಿಗುಡ್ಡೆಗಳನತ್ತಿತ್ತ
ತಿರುಗಿಸಿ, ತುಂಬಿದೆದೆಗಳಿಗೆ ಟೈಟು ರವಿಕೆಯನೇರಿಸಿ
ಕನಸು ಸ್ಖಲನಗಳ ನಕಲಿಗೊಳಿಸುವ ನಿನಗೆ
ಹೂವೆರಚುವ ಹರಸಾಹಸ ಮಾಡಿದ್ದ
ನನಗೀಗ ಎಗ್ಗಿಲ್ಲದ ಮ್ಊನ.
........ರಾಶೇಕ್ರ
No comments:
Post a Comment