ಸ್ವಗತ
ಹರೆಯಕ್ಕೆ ಬಂದ ನಾನು
ಊರ ಹೈಕಳ ಕಟ್ಟಿಕೊಂಡು
ಹಾದಿ ಬೀದಿಯಲಿ ಅಂಡಾಪೋಲಿಯಾಗಿ
ಅಲೆಯುತ್ತೇನೆ,
ಹದಿನಾರು ದಾಟಿದ ಹೆಣ್ಣುಮಕ್ಕಳೆಲ್ಲ
ಒಸಲುಗಳ ದಾಟರು
ಬೀದಿಯೊಳಗಿನ ನಮ್ಮ ರಾಜ ನಡಿಗೆಗೆ
ಥರಥರ ನಡುಗುವರು
ಗುಂಪು ಸೇರಿ ಶಪಿಸುವರು,
ಊರೊಳಗಿನ ಅರಳೀಕಟ್ಟೆಯ
ಮರೆಯಲ್ಲಿನ ಕಿರಾಣಿ ಅಂಗಡಿಯಲಿ
ಕೂತು ಸಿಗರೇಟು ಹೊಗೆಯನ್ನು
ಸ್ವಲ್ಪ ಸ್ವಲ್ಪವಾಗಿ ಟೀಯ ಜೊತೆಗೆ
ಉದರ ಸೇರಿಸುತ್ತೇನೆ,
ಕಂಡೋರ ಮನೆಯ
ಪಡಸಾಲೆಗಳು ನಮಗೆ ಪಾರ್ಲಿಮೆಂಟಾಗುತ್ತವೆ
ಬಡ ಬ್ರಾಹ್ಮಣ, ಪುರೋಹಿತನ ಮಗಳು
ಮತ್ತವಳ ವಯ್ಯಾರಗಳು ಚರ್ಚಗೆ ಸಿಗುತ್ತವೆ
ನಮ್ಮೆದುರು ವಾಲಾಡಿ ಕೆಂಗಣ್ಣಿಗೆ ಗುರಿಯಾಗಿ
ನಮ್ಮ ಬಾಯಲ್ಲೆ ಶೀಲಗೆಡುತ್ತವೆ.
......ರಾಶೇಕ್ರ
ಹರೆಯಕ್ಕೆ ಬಂದ ನಾನು
ಊರ ಹೈಕಳ ಕಟ್ಟಿಕೊಂಡು
ಹಾದಿ ಬೀದಿಯಲಿ ಅಂಡಾಪೋಲಿಯಾಗಿ
ಅಲೆಯುತ್ತೇನೆ,
ಹದಿನಾರು ದಾಟಿದ ಹೆಣ್ಣುಮಕ್ಕಳೆಲ್ಲ
ಒಸಲುಗಳ ದಾಟರು
ಬೀದಿಯೊಳಗಿನ ನಮ್ಮ ರಾಜ ನಡಿಗೆಗೆ
ಥರಥರ ನಡುಗುವರು
ಗುಂಪು ಸೇರಿ ಶಪಿಸುವರು,
ಊರೊಳಗಿನ ಅರಳೀಕಟ್ಟೆಯ
ಮರೆಯಲ್ಲಿನ ಕಿರಾಣಿ ಅಂಗಡಿಯಲಿ
ಕೂತು ಸಿಗರೇಟು ಹೊಗೆಯನ್ನು
ಸ್ವಲ್ಪ ಸ್ವಲ್ಪವಾಗಿ ಟೀಯ ಜೊತೆಗೆ
ಉದರ ಸೇರಿಸುತ್ತೇನೆ,
ಕಂಡೋರ ಮನೆಯ
ಪಡಸಾಲೆಗಳು ನಮಗೆ ಪಾರ್ಲಿಮೆಂಟಾಗುತ್ತವೆ
ಬಡ ಬ್ರಾಹ್ಮಣ, ಪುರೋಹಿತನ ಮಗಳು
ಮತ್ತವಳ ವಯ್ಯಾರಗಳು ಚರ್ಚಗೆ ಸಿಗುತ್ತವೆ
ನಮ್ಮೆದುರು ವಾಲಾಡಿ ಕೆಂಗಣ್ಣಿಗೆ ಗುರಿಯಾಗಿ
ನಮ್ಮ ಬಾಯಲ್ಲೆ ಶೀಲಗೆಡುತ್ತವೆ.
......ರಾಶೇಕ್ರ
No comments:
Post a Comment