ಬಾರೆ ತುಂಡು ಲಂಗದ ಹುಡುಗಿ
ಕೈಕೈ ಬೆಸೆದು ಕೇರಿಗಳ ಸುತ್ತುವ,
ಬೇಕುಗಳ ಬಯಸುವ,
ಸಾಲು ಮನೆಗಳ ತೆರೆದ ಬಾಗಿಲಲಿ
ನಿಂತ ಮುಚ್ಚು ಮನಗಳಿಗೆ ಹುಚ್ಚು ಹಿಡಿಸುವ
ಶ್ವೇಚ್ಛೆಯಾಗುವ,
ಅಲ್ಲಿ ಆ ಗುಡಿಯ ಬಾಗಿಲಲಿ
ಅವಲಕ್ಕಿ ಕೊಟ್ಟರೆ ಹಂಚಿ ತಿನ್ನುವ
ಕಲ್ಲು ದೇವರಿಗೆ ಕಣ್ಣು ಹೊಡೆಯುವ,
ಅದೇ ದಾರಿಯ ಪುಂಡ ಗೆಳೆಯರಿಗೆಲ್ಲ
ಕಣ್ಣು ಕೆಂಪಾಗಿ ಹಿಡಿ ಶಾಪವಾದರೂ ಹಾಕಲಿ
ಬೆರಗು ಕಣ್ಣುಗಳು ಬಿರಿದುಕೊಳಲಿ,
ಬಿಸಿಲಾದರೆ ಒಣಗಿಬಿಡುವ
ಮಳೆ ಬಿದ್ದರೆ ನೆನೆದು ಬಿಡುವ
ಚಳಿಯೊಳಗೆ ನಡುಗಿಬಿಡುವ,
ಒಟ್ಟಾರೆ ಇದ್ದುಬಿಡುವ ಇದ್ದರೂ
ಇರದಂತೆ ಬೇಲಿ ಮರೆಯಲಿ ಮರೆಯಾದಂತಿರದೆ
ಬೀದಿಗಿಳಿದು ನಡೆದುಬಿಡುವ,
ನಕ್ಕವರೆಲ್ಲ ನಗಲಿ ನನ್ನ ಕಪ್ಪು ಕಂಡು
ಇಲ್ಲವೇ ನಿನ್ನ ಬಿಳಿಯ
ಕಾಮನಬಿಲ್ಲ ಅಲ್ಲೆ ರೋಡಿಗೆಳೆದುಬಿಡುವ,
ರಂಗೆದ್ದು ಬಿಡಲಿ ಬೀದಿಗಳೆಲ್ಲ
ಊರು ಕೇರಿಗಳೆಲ್ಲ ನಮ್ಮೊಲವಿನ
ಏಳು ಬಣ್ಣಗಳದ್ದೇ,
ಬಾರೆ ಗೆಳತಿ ನಡೆದುಬಿಡುವ ಬರಿಗಾಲಿನಲೇ
ಗೆಜ್ಜೆ ಸದ್ದಾಗಲೀ, ಕಿಸೆಯ ಚಿಲ್ಲರೆಯ ಕುಹಕ
ಅದರೆದುರು ತಣ್ಣಗಾಗಲಿ,
ಮೃದು ಅಂಗೈಗೆ ಒರಟು ಕೈ ನೋವಾದರೆ
ಗುದ್ದಿಬಿಡು ಗೆಳತಿ ನನ್ನ ಬೆನ್ನಾದರೂ ನಗಲಿ
ಹನಿಹನಿ ಮಳೆಯೇ ಆಗಲಿ.
......ರಾಶೇಕ್ರ
ಕೈಕೈ ಬೆಸೆದು ಕೇರಿಗಳ ಸುತ್ತುವ,
ಬೇಕುಗಳ ಬಯಸುವ,
ಸಾಲು ಮನೆಗಳ ತೆರೆದ ಬಾಗಿಲಲಿ
ನಿಂತ ಮುಚ್ಚು ಮನಗಳಿಗೆ ಹುಚ್ಚು ಹಿಡಿಸುವ
ಶ್ವೇಚ್ಛೆಯಾಗುವ,
ಅಲ್ಲಿ ಆ ಗುಡಿಯ ಬಾಗಿಲಲಿ
ಅವಲಕ್ಕಿ ಕೊಟ್ಟರೆ ಹಂಚಿ ತಿನ್ನುವ
ಕಲ್ಲು ದೇವರಿಗೆ ಕಣ್ಣು ಹೊಡೆಯುವ,
ಅದೇ ದಾರಿಯ ಪುಂಡ ಗೆಳೆಯರಿಗೆಲ್ಲ
ಕಣ್ಣು ಕೆಂಪಾಗಿ ಹಿಡಿ ಶಾಪವಾದರೂ ಹಾಕಲಿ
ಬೆರಗು ಕಣ್ಣುಗಳು ಬಿರಿದುಕೊಳಲಿ,
ಬಿಸಿಲಾದರೆ ಒಣಗಿಬಿಡುವ
ಮಳೆ ಬಿದ್ದರೆ ನೆನೆದು ಬಿಡುವ
ಚಳಿಯೊಳಗೆ ನಡುಗಿಬಿಡುವ,
ಒಟ್ಟಾರೆ ಇದ್ದುಬಿಡುವ ಇದ್ದರೂ
ಇರದಂತೆ ಬೇಲಿ ಮರೆಯಲಿ ಮರೆಯಾದಂತಿರದೆ
ಬೀದಿಗಿಳಿದು ನಡೆದುಬಿಡುವ,
ನಕ್ಕವರೆಲ್ಲ ನಗಲಿ ನನ್ನ ಕಪ್ಪು ಕಂಡು
ಇಲ್ಲವೇ ನಿನ್ನ ಬಿಳಿಯ
ಕಾಮನಬಿಲ್ಲ ಅಲ್ಲೆ ರೋಡಿಗೆಳೆದುಬಿಡುವ,
ರಂಗೆದ್ದು ಬಿಡಲಿ ಬೀದಿಗಳೆಲ್ಲ
ಊರು ಕೇರಿಗಳೆಲ್ಲ ನಮ್ಮೊಲವಿನ
ಏಳು ಬಣ್ಣಗಳದ್ದೇ,
ಬಾರೆ ಗೆಳತಿ ನಡೆದುಬಿಡುವ ಬರಿಗಾಲಿನಲೇ
ಗೆಜ್ಜೆ ಸದ್ದಾಗಲೀ, ಕಿಸೆಯ ಚಿಲ್ಲರೆಯ ಕುಹಕ
ಅದರೆದುರು ತಣ್ಣಗಾಗಲಿ,
ಮೃದು ಅಂಗೈಗೆ ಒರಟು ಕೈ ನೋವಾದರೆ
ಗುದ್ದಿಬಿಡು ಗೆಳತಿ ನನ್ನ ಬೆನ್ನಾದರೂ ನಗಲಿ
ಹನಿಹನಿ ಮಳೆಯೇ ಆಗಲಿ.
......ರಾಶೇಕ್ರ
No comments:
Post a Comment