Thursday, 27 June 2013

ಮರೆತಿಲ್ಲ ನಾ ನಿನ್ನ

ಮರೆತಿಲ್ಲ ನಾ ನಿನ್ನ

ಮರೆತಿಲ್ಲ ನಾ ನಿನ್ನ
ಹಿಂಗಾರು ಮುಂಗಾರಿನಲಿ ಸುರಿದ
ಜಿಟಿಪಿಟಿ ಜಡಿ ಮಳೆಗಳಲಿ
ಬರೇ ನಿನ್ನದೇ ನೆನಪುಗಳನೆ ಮೆದ್ದಿದ್ದೇನೆ,

ಉಸುರಿಲ್ಲ ನಿನ್ನೆಸರ ಎಲ್ಲೂ
ಗೆಳೆಯರ ಸಂಗಡ ಅಲ್ಲಲ್ಲಿ ಚರ್ಚೆಗಳು ನಡೆದಾಗ
ಎದೆಯೊಳಗೆ ಜರುಗಿದ
ಅಧಿವೇಶನಗಳಲ್ಲೇನಾದರೂ ಉಸಿರಿದ್ದಿರಬಹುದು

ಕಾಲ್ನಡಿಗೆಯಲಿ ಹೊರಟು ಇಳಿ ಸಂಜೆಯಲಿ
ಕೆರೆ ಏರಿಯ ಮೇಲೊಬ್ಬನೇ
ಕಟ್ಟಿರುವೆ ಸಾಲೊಳಗೆ ಅಡ್ಡಗೆರೆ ಎಳೆದು
ನಗುತ್ತೇನೆ ನಿನ್ನಂತೆ ಭಂಗ ಮಾಡಿ

ತೀರದಲಿ ಅಲೆಯಲೆಯೂ ದಡವ
ಒದ್ದೆಯಾಗಿಸಿದಾಗೆಲ್ಲ, ತೊಟ್ಟು ತೊಟ್ಟೇ
ತೊಟ್ಟಿಕ್ಕುತ್ತದೆ ಕಂಬನಿ ಕಪಾಲವನು ನೆನೆಸಿ
ಅಲೆ ನಿಲ್ಲುವುದೇ ಇಲ್ಲ, ಕೊನೆ ಇಲ್ಲ

ಮೆರೆದ ಹಿರಿಮೆಗಳು ಗೌಣವಾಗಿದೆ ಈಗ
ನೀನಿರದಿರಲು ನೆನಪುಗಳದ್ದೇ ಇರಿತ
ಸೋರುತ್ತದೆ ರಕ್ತ ಹನಿಹನಿಯೂ
ಹಿಮೋಗ್ಲೋಬಿನ್ನಿನ ಬದಲು ನಿನ್ನಿರುವಿಕೆ ಅಲ್ಲಿ,

......ರಾಶೇಕ್ರ

No comments:

Post a Comment