ಪ್ರೀ......ತಿ
ನಡುರಾತ್ರಿಯ ಅರೆನಿದ್ದೆಯ
ಬಿಟ್ಟಿ ಕನಸುಗಳಲ್ಲಿ ನೀ ನಕ್ಕಾಗ
ಹುಡುಗಿ, ಹಳದಿ ಹಲ್ಲುಗಳಲ್ಲಿ ಹೊಸ ಹೊಳಪು
ಅಪರೂಪದ ಮೆಳ್ಳಗಣ್ಣಿನಲಿ
ನೀ ಓರೆ ನೋಟ ಬೀರಿದರೆ
ನನ್ನನ್ನೇ ದಿಟ್ಟಿಸಿದಂತೆ ಭಾಸ
ಎದೆ ಕಟ್ಟೆಯೊಡೆದು ಬೀದಿಗಳಲ್ಲೆಲ್ಲ ಹರಿಯುತ್ತದೆ ಪ್ರೀತಿ
ಬಿಗಿಯಾದ ಜೀನ್ಸ್ ತೊಟ್ಟು
ನೀ ನನ್ನೆಡೆಗೇ ಬರುವಾಗ
ಕೈ ಕಟ್ಟಿ ನಿಂತು
ಉಬ್ಬು ತಗ್ಗುಗಳ ಕದ್ದು ನೋಡುವಾಸೆ
ಚಿಮ್ಮುತ್ತದೆ ಲಾಲಾರಸದ ಕಾರಂಜಿ ತುಟಿಗಳಲ್ಲಿ
ಮೋಟು ಜಡೆಗೆ ನೀ ಮಲ್ಲಿಗೆ ಮುಡಿದರೆ
ಘಮ್ಮಘಮ್ಮಾಡಿಸುತ್ತದೆ ನನ್ನ ನಾಸಿಕ
ಆಗೆಲ್ಲ ನಾನೂ ಬಿರಿಯುತ್ತೇನೆ
ವಾರದಿಂದ ನೀರು ಕಾಣದ ಕೊಳೆ ಮೈಯ್ಯ ಮೂಸಿ.
.......ರಾಶೇಕ್ರ
ನಡುರಾತ್ರಿಯ ಅರೆನಿದ್ದೆಯ
ಬಿಟ್ಟಿ ಕನಸುಗಳಲ್ಲಿ ನೀ ನಕ್ಕಾಗ
ಹುಡುಗಿ, ಹಳದಿ ಹಲ್ಲುಗಳಲ್ಲಿ ಹೊಸ ಹೊಳಪು
ಅಪರೂಪದ ಮೆಳ್ಳಗಣ್ಣಿನಲಿ
ನೀ ಓರೆ ನೋಟ ಬೀರಿದರೆ
ನನ್ನನ್ನೇ ದಿಟ್ಟಿಸಿದಂತೆ ಭಾಸ
ಎದೆ ಕಟ್ಟೆಯೊಡೆದು ಬೀದಿಗಳಲ್ಲೆಲ್ಲ ಹರಿಯುತ್ತದೆ ಪ್ರೀತಿ
ಬಿಗಿಯಾದ ಜೀನ್ಸ್ ತೊಟ್ಟು
ನೀ ನನ್ನೆಡೆಗೇ ಬರುವಾಗ
ಕೈ ಕಟ್ಟಿ ನಿಂತು
ಉಬ್ಬು ತಗ್ಗುಗಳ ಕದ್ದು ನೋಡುವಾಸೆ
ಚಿಮ್ಮುತ್ತದೆ ಲಾಲಾರಸದ ಕಾರಂಜಿ ತುಟಿಗಳಲ್ಲಿ
ಮೋಟು ಜಡೆಗೆ ನೀ ಮಲ್ಲಿಗೆ ಮುಡಿದರೆ
ಘಮ್ಮಘಮ್ಮಾಡಿಸುತ್ತದೆ ನನ್ನ ನಾಸಿಕ
ಆಗೆಲ್ಲ ನಾನೂ ಬಿರಿಯುತ್ತೇನೆ
ವಾರದಿಂದ ನೀರು ಕಾಣದ ಕೊಳೆ ಮೈಯ್ಯ ಮೂಸಿ.
.......ರಾಶೇಕ್ರ
No comments:
Post a Comment