Friday, 14 June 2013

ದೀಪದಡಿಯ ಕಕ್ಕಸು

ಮೋರಿಯಲಿ ಸಿಕ್ಕ ನೈಂಟಿ ಬಾಟಲೊಳಗೆ
ಪಡಿತರ ಸೀಮೆಎಣ್ಣೆ
ಅಪ್ಪನ ಹರಿದ ಪಂಚೆಯ ಬತ್ತಿ
ಮೇಲುರಿದ ಉರಿಯಷ್ಟೇ ಭಗವಂತ

ಸುಯ್ಯನೆ ಬಂದು ಟಪ್ಪನೊಡೆದು
ಬಿದ್ದ ಹುಳದ ದಿಗಿಲಿಗೆ ಹೊರಬಿದ್ದ ಕಕ್ಕಸು
ಕೈಗಂಟಿ ಬಾಯಿಗೆ ರುಚಿ ಹತ್ತುತ್ತದೆ
ನಿನ್ನದೇ ನೆನಪುಗಳ ಡೈರಿಯ ಪೇಜು ತಿರವಿದಾಗ

ಉರಿವ ದೀಪದ ಜ್ವಾಲೆ
ನಿನ್ನಂತೆ ನಿಯತ್ತಿಲ್ಲ ಅದಕ್ಕೂ
ಹೊತ್ತು ನಿಂತ ಗೋಡೆಯ ಮೂತಿಗೆ ಮಸಿ ಬಳಿದು
ಚಿತ್ತಾರವೆನ್ನುತ್ತದೆ ಫಕ ಫಕನೆ ನಗುತ್ತದೆ

ಹೀಗೆ ಎಂಥೆಂಥವೋ ಇಣುಕುತ್ತವೆ
ನೀನಿರದ ಸರಕಾರದಿ
ತಿಳಿಗಾಳಿಯ ನೆಪ ಮಾಡಿ
ಕರೆಂಟು ತೆಗೆದ ಹೊತ್ತಿನಲಿ

.......ರಾಶೇಕ್ರ

No comments:

Post a Comment