Wednesday 4 September 2013

ಗಜಲ್ 21

ಏಸೋ ದಿನಗಳ ಕಳೆದೆನು ಸುಮ್ಮನೆ ಈಗಲಾದರೂ ನಗುವೆನು ನೋಡು
ಬತ್ತಿದ ಕೊಳದೊಳು ಈಜುವ ಕನಸನು ಸುಮ್ಮನೇನೆ ಕಂಡಿರುವೆನು ನೋಡು

ತುಂಬಿದ ಊರೊಳು ಒಂಟಿ ಈ ಜೀವನ ಯಾತಕಾದರು ಕಳೆದೆನೊ ಕಾಣೆ
ಬರಿಯ ಬಯಲಲಿ ಒಂದೆ ಕಾಲಿರುವುದು ಹರಿದ ಗಂಟಲಲೆ ಕೂಗುತಿಹೆನು ನೋಡು

ಒಣಗಿದ ಮರದಡಿ ಜೊಂಪೊಡೆಯುವ ಮನವಿದು ಯಾರಿಗೆ ಕಾದಿದೆಯೊ
ಕಾಯುವಿಕೆಯ ನಡೆಗೆಲ್ಲಿದೆ ಕೊನೆಯು ಏನನು ಬಯಸದೆ ಹಾಡುವೆನು ನೋಡು

ಗೋಳಿಡಿದಿದೆ ಈ ಒಣಗಿದ ಎಲುಬು ಜಾರಿದೆ ಹನಿಹನಿ ಕಂಬನಿಯು
ತೊಪ್ಪನೆ ಬೀಳುವ ಸದ್ದಿಗೆ ಹೆದರದೆ ಕೂತಿರುವ ಈ ಪರಿಯನು ನೋಡು

ತುಂಬು ಹೃದಯದ ತುಂಬಾ ನೋವಿದೆ ಘಳಿಗೆಘಳಿಗೆಗೂ ಪೂರಾ ನೊಂದಿದೆ
ನೋವನೆ ಉಣ್ಣುವ 'ರಾಜ'ನೆ ಕೇಳು ನೋವಿನಲ್ಲೂ ನಾ ನಗುವೆನು ನೋಡು.

ಗಜಲ್ 20

ನಡೆದಿರುವ ಹಾದಿಯಲಿ ನೂರೆಂಟು ಮುಳ್ಳುಂಟು ಸೇರಬೇಕಿದೆ ಗಮ್ಯ
ಯಾವ ರೂಪಾಂತರದ ಬಣ್ಣ ಬಳಿದರು ಕೂಡ ತಲುಪಬೇಕಿದೆ ಗಮ್ಯ

ನೂರು ಸಾವಿರ ನೋವು ಆರು ಸಾವಿರ ಕಾವು ಚುಚ್ಚುವುದು ನನ್ನ ಎದೆಯ
ಮುದಿ ನೋವುಗಳಿಗೀಗ ಮದ್ದು ತರಲೇಬೇಕು ದೂರದಲ್ಲಿದೆ ಗಮ್ಯ

ಸಾಗೊ ಹಾದಿಯ ತುಂಬ ನಿನ್ನ ನೆನಪುಗಳುಂಟು ಕಣ್ಣೆದುರೆ ಕುಣಿಕುಣಿದು
ಮೈ ಎಲ್ಲ ಕಣ್ಣಾಗಿ ನೆನಪುಗಳಿಗೆದುರಾಗಿ ದೂರಕೆ ಸಾಗುತ್ತಲಿದೆ ಗಮ್ಯ

ಚರ್ಮವಿದು ಸುಕ್ಕಾಗಿ ಕರಿಕೇಶ ಬಿಳಿಯಾಗಿ ಗಹಗಹಿಸೊ ಪರಿ ಏನು
ಹಿಂದೆ ತಿರುಗದೆ ಎಂದೂ ನೇರ ನಡೆ ನಡೆಯುವೆನು ಕೈಗೆಟುಕದೇ ಗಮ್ಯ

ಅರಮನೆಯ ಹಂಗೇಕೆ ಸಿರಿಸುಖದ ಗುಂಗೇಕೆ ಎಲ್ಲ ತೊರೆಯಲೆ 'ರಾಜ'
ಕೃಶವಾದ ದೇಹಕ್ಕೆ ಚೂರು ಹೊಳಪನು ತರಲು ಹೊಕ್ಕಬೇಕಿದೆ ಗಮ್ಯ.

ಗಜಲ್ 19

ಯಾರೊ ನಡೆದ ದಾರಿಯಲ್ಲೆ ಯಾಕೆ ನಡೆವೆ ಭ್ರಮೆಯ ತೊರೆಯೊ
ಯಾರೊ ಬರೆದ ಕಾವ್ಯವನ್ನೆ ಯಾಕೆ ಬರೆವೆ ಭ್ರಮೆಯ ತೊರೆಯೊ

ಹೊಸತು ನಡೆಯ ನಡೆಯಬೇಕು ಹಳತು ದಾರಿ ಮರೆಯಬೇಕು
ಯಾಕೆ ಹಳತು ಗಮ್ಯವನ್ನೆ ನೀನು ತೆರೆವೆ ಭ್ರಮೆಯ ತೊರೆಯೊ

ಅವನು ಕೂಡ ಅದನೆ ಬರೆದ ನೀನೆ ಹೊಸತ ಬರೆಯಬೇಕು
ಬರೆದು ಸೋತು ಕೂರಬೇಡ ನೀನೆ ಗೆಲುವೆ ಭ್ರಮೆಯ ತೊರೆಯೊ

ಜಾತಿಯಂತೆ ಧರ್ಮವಂತೆ ಗುಡಿಯಲದಾರೊ ದೇವರಂತೆ
ಬಣ್ಣ ಬಳಿದು ನಟಿಪರೆದುರು ಜೋರು ನಗುವೆ ಭ್ರಮೆಯ ತೊರೆಯೊ

ತುಕ್ಕು ಹಿಡಿದ ತಂತಿಯನ್ನು ಮೀಟಿದರದು ಶೃತಿಯು ಎಲ್ಲಿ
ಬಾಳ ತಂತಿ ನುಡಿಸೊ 'ರಾಜ' ಕೀರ್ತಿ ಪಡೆವೆ ಭ್ರಮೆಯ ತೊರೆಯೊ

ಗಜಲ್ 18

ಯಾರೊ ನಡೆದ ದಾರಿಯಲ್ಲೆ ಯಾಕೆ ನಡೆವೆ ಭ್ರಮೆಯ ತೊರೆಯೊ
ಯಾರೊ ಬರೆದ ಕಾವ್ಯವನ್ನೆ ಯಾಕೆ ಬರೆವೆ ಭ್ರಮೆಯ ತೊರೆಯೊ

ಹೊಸತು ನಡೆಯ ನಡೆಯಬೇಕು ಹಳತು ದಾರಿ ಮರೆಯಬೇಕು
ಯಾಕೆ ಹಳತು ಗಮ್ಯವನ್ನೆ ನೀನು ತೆರೆವೆ ಭ್ರಮೆಯ ತೊರೆಯೊ

ಅವನು ಕೂಡ ಅದನೆ ಬರೆದ ನೀನೆ ಹೊಸತ ಬರೆಯಬೇಕು
ಬರೆದು ಸೋತು ಕೂರಬೇಡ ನೀನೆ ಗೆಲುವೆ ಭ್ರಮೆಯ ತೊರೆಯೊ

ಜಾತಿಯಂತೆ ಧರ್ಮವಂತೆ ಗುಡಿಯಲದಾರೊ ದೇವರಂತೆ
ಬಣ್ಣ ಬಳಿದು ನಟಿಪರೆದುರು ಜೋರು ನಗುವೆ ಭ್ರಮೆಯ ತೊರೆಯೊ

ತುಕ್ಕು ಹಿಡಿದ ತಂತಿಯನ್ನು ಮೀಟಿದರದು ಶೃತಿಯು ಎಲ್ಲಿ
ಬಾಳ ತಂತಿ ನುಡಿಸೊ 'ರಾಜ' ಕೀರ್ತಿ ಪಡೆವೆ ಭ್ರಮೆಯ ತೊರೆಯೊ

ಗಜಲದ 17

ನಿನ್ನಂತಿರದಿರೊ ನನಗೆ ತರ್ಪಣವನರ್ಪಿಸಿ ಮುಕ್ತನಾಗು
ಭುವಿಗೆ ಬಿದ್ದಿರೊ ಬೆಳಕ ಕಡಗತ್ತಲೆಂದೆನಿಸಿ ಮುಕ್ತನಾಗು

ನಡೆಯೊಳಗೇನನೊ ಕಂಡು ಶ್ರಂಗಾರವೆನಿಸಿರಲು
ಎದೆಯ ಬೆಳಕದು ಒಳಗೆ ನಿಜಹೇಳಿತೆಂದೆಣಿಸಿ ಮುಕ್ತನಾಗು

ನಗೆಯೊಳಗೇನೊ ಅದು ವಿಷವಾಗಿ ತಿರುಗುತಿರೆ
ಕಹಿಯ ಸತ್ಯವು ನಿನಗೆ ಗುರಿತೋರತೆಂದೆನಿಸಿ ಮುಕ್ತನಾಗು

ನಡೆವ ದಾರಿಯಲೆಡವೆ ಶುಭವೆನ್ನುತದೆ ಮನವು
ಬೆರಳ ತುದಿಯಲಿ ರಕುತ ಅತಿಕ್ರೂರಕೆಂಪೆನಿಸಿ ಮುಕ್ತನಾಗು

ಕಣ್ಣ ಹೊಳಪದು ಬಿಳುಪು ಬರಿಸುಣ್ಣ ಹೇ 'ರಾಜ'
ಏಳು ಬಣ್ಣದಿ ಕಲೆತ ಅರೆಬರೆಯದಿದೆಂದೆನಿಸಿ ಮುಕ್ತನಾಗು

ಗಜಲ್ 16

ಬಿಟ್ಟು ಹೋಗಿರುವವಳೆ ಬೆಚ್ಚಗಿರು ಎನ್ನುತಲಿ ನಾನು ನಗುವೆ
ಉಚ್ಚೆ ಉಯ್ಯುವಾಗಲು ನಿನ್ನನೆ ನೆನೆಯುತಲಿ ನಾನು ನಗುವೆ

ಕಚ್ಚೆ ಹರಿದಿತ್ತಾಗ ಕರಿನೆರಳ ತೊಡೆಯೊಳಗೆ ನೀನು ಇದ್ದೆ
ಹೊಳೆಯದಿಬ್ಬಳೆ ವೀರ್ಯ ಸೇವೆಯನು ಗೈಲಿ ನಾನು ನಗುವೆ

ರವಿಕೆ ಗುಂಡಿಯ ಕಳೆದು ನಿರ್ವಸ್ತ್ರ ಬಯಲೊಳಗೆ ಮಾಡು ನಿದ್ದೆ
ಸದ್ದಿರದೆ ಬಳಿ ಬಂದು ಸುದ್ದಿಯನು ಮಾಡುತಲಿ ನಾನು ನಗುವೆ

ನೀಳ ತೊಡೆಗಳ ಕಂಬ ಏರುವುದ ಕಲಿಯುವೆನು ಹಾಗೊ ಹೀಗೊ
ನಾಳೆ ಮಗನೂ ಕಲಿತು ಮೊಮ್ಮಕ್ಕಳನಾಡಿಸಲಿ ನಾನು ನಗುವೆ

ಯಾಕಿಂತ ಕನಸ ಕಂಡೆ ಹೋದವಳು ಬಂದಾಳೆ ಮಗ 'ರಾಜ'
ಮಲಗಿನ್ನೊಂದೆರಡು ಘಳಿಗೆ ಬಿಸಿಲು ಚುಳ್ಳೆನಿಸಿಬಿಡಲಿ ನಾನು ನಗುವೆ.

ಗಜಲ್ 15

ಸಣ್ಣಗೆ ಬಡಿಯುತ ಲಬ್ ಡಬ್ ಎನ್ನುತ ಮಿಸುಕಾಡುತದೆ ನನ್ನ ಹೃದಯ
ರಕುತವ ತಳ್ಳುತ ಜೀವವನುಳಿಸುತ ಓ ಹಾಯ್ ಎಂದಿದೆ ನನ್ನ ಹೃದಯ

ಹರೆಯದ ಹುಡುಗಿಯ ರಸ್ತೆಲಿ ಕಂಡರೆ ತನ್ನೊಳಗೇನೆ ಸಣ್ಣಗೆ ನಗುತದೆ
ಕಣ್ ಕಣ್ ಹೊಡೆಯುತ ಹೂವನು ಹಿಡಿದು ಕೋರಿಕೆಯಿಟ್ಟಿದೆ ನನ್ನ ಹೃದಯ

ಎಳೆ ಹೃದಯವೆ ನಿನಗ್ಯಾತಕೆ ಪ್ರೀತಿ ಸುಮ್ಮನಿರದೆ ನಿನಗೇಕೀ ಗೊಡವೆ
ಎನ್ನುವ ಪ್ರಶ್ನೆಗೆ ಜೋರಾಗಿ ಬಡಿದು ಘಾಸಿಯ ಮಾಡಿದೆ ನನ್ನ ಹೃದಯ

ಆ ಹೆಣ್ ಹೃದಯಕೆ ನನ್ನದು ಒಪ್ಪಿಗೆ ಒಲವಿಲ್ಲಿಂದಲೇ ಶುರುವಾಯ್ತು
ಬರಿ ಕಣ್ಸನ್ನೆಲೆ ಪ್ರೀತಿಯ ಮಾಡುತ ಚೂರ್ ಚೂರೇ ನಕ್ಕಿದೆ ನನ್ನ ಹೃದಯ

ಈ ಬಿಳಿಹೃದಯಕೆ ಎಚ್ಚರವೆಲ್ಲಿದೆ ಬಣ್ಣವ ಹಚ್ಚಲೇ ಹೇ 'ರಾಜ'
ಏಳುಬಣ್ಣದೆ ಫಳ್ಳನೆ ಹೊಳೆದು ಸಾರ್ಥಕ ಪಡೆಯದೇ ನನ್ನ ಹೃದಯ