Thursday 25 July 2013

ಗೆಳೆಯಾ.....

ಗೆಳೆಯಾ

ಮೆಲ್ಲಗೆ ಮಂಚದ ಮೇಲೆ ನಾನು
ಯಾರದೋ ತೀಟೆಗೆ ಹುಟ್ಟಿ
ಇನ್ನಾರದೋ ತೀಟೆಗೀಗ ಕಾದು
ನಾಳೆ ರಾತ್ರಿ ಮತ್ತಿನ್ಯಾರದ್ದೋ
ಅಥವಾ ಇವತ್ತು ರಾತ್ರಿಯೇ
ಗಡ್ಡದವನಿಗೋ ಚೊತ್ತ ಕೈ
ಅದುಮಿಕೆಗೋ ಹಾಸಿಕೊಂಡು ಮೈನ
ಎಲ್ಲ ಕಳೆದು ದುಂಡು ಮೊಲೆಯ
ಬಿಚ್ಚಿಟ್ಟಿದ್ದೇನೆ ಎಳೆದೆಳೆದು ಅದುಮಿ
ಜೋತು ಕೆಡವುವ ಕೆಂಪು
ಕಣ್ಣಿಗಂದವಾಗಿ ಕಾಣಲು ನನ್ನ
ನಾನು ಸಿಂಗರಿಸಿ ಮೆತ್ತಿ
ಕಣ್ಣಿಗೆ ಕಾಡಿಗೆ ಮಾತಿಗೊಂದಷ್ಟು
ಮಾದಕತೆಯ ಜೋಡಿಸಿ
ಆಳಕಿಳಿವ ಶಿಶ್ನದ ಸುಖ ಮೊದಲಿರುಳಲೇ
ಕೊನೆಯಾಗಿ ಈಗೇನಿದ್ದರೂ ಬರೀ
ಉಜ್ಜಾಟವಷ್ಟೇ ಕೆದರಿದ ಕೇಶ
ಗಂಟುಕಟ್ಟಲಿಕ್ಕಿಕೊಂಡಿದೆ
ಕಣ್ಣು ಗುಂದಲು ಮೊಲೆ ಇಳಿ
ಬೀಳಲು ಮೌನದೊಳು ಸದ್ದು ಹುಟ್ಟಿ
ಬೆಚ್ಚಿ ಬೀಳಿಸುತಿದೆ ಈಗೀಗ
ನೀನೂ ನೆನಪಾಗುತಿಲ್ಲ.

ರಾಶೇಕ್ರ

No comments:

Post a Comment