Thursday 8 August 2013

ಗಜಲ್ 1

ಗಜಲ್-1

ನಾಕು ಮನೆಯ ಕಸದ ಕುಪ್ಪೆ ಎಸೆದರೂನು ಸುಮ್ಮನಿರುವೆ
ಹೊತ್ತಿನನ್ನಕೆಂದು ಬಡವ ಅಗೆದರೂನು ಸುಮ್ಮನಿರುವೆ

ಯುದ್ಧ ಸಾರಿ ತಲೆಯ ಸವರಿ ನೆತ್ತರನ್ನು ಕೋಡಿ ಹರಿಸಿ
ಕೆಂಪು ತುಟಿಯ ಹಲ್ಲು ಬಿರಿದು ನಕ್ಕರೂನು ಸುಮ್ಮನಿರುವೆ

ರಾಜ್ಯವಾಳೊ ದೊರೆಯು ತಾನು ನಿನ್ನನೆ ವಶ ಮಾಡಿಕೊಂಡು
ಪಾಪಿ ನಿನ್ನ ಎದೆಯ ಮೆಟ್ಟಿ ಕುಣಿದರೂನು ಸುಮ್ಮನಿರುವೆ

ಕಳ್ಳರೆಲ್ಲ ಗುಂಪುಗೂಡಿ ನಿನ್ನ ಎದೆಯ ತೂತ ಮಾಡಿ
ನುಸುಳುತೆಲ್ಲ ಗುಡಿಗಳನ್ನೆ ಕದ್ದರೂನು ಸುಮ್ಮನಿರುವೆ

'ರಾಜ' ಕೇಳೊ ಭೂಮಿ ತಾಯಿ ತಡವಿದಳು ತನ್ನ ಕೈಯ
ಯಾಕೆ ಹೀಗೆ ಕಿವಿಯ ಮುಚ್ಚಿ ಕರೆದರೂನು ಸುಮ್ಮನಿರುವೆ.

ರಾಶೇಕ್ರ

No comments:

Post a Comment