Thursday 8 August 2013

ಗಜಲ್ 2

ಗಜಲ್ 2

ಬೆಳದಿಂಗಳ ಬೆಳಕಿನಲೊಂದು ದಿನ ಹೊರಟಿದ್ದೆ ನನ್ನ ಗೆಲಲು
ಪೂರ್ಣ ಚಂದ್ರನಿರುವಿನಲೂ ಗವ್ವೆಂದಿತರೆಕ್ಷಣ ನಡೆದಿದ್ದೆ ನನ್ನ ಗೆಲಲು

ಎಲ್ಲವನು ಪಡೆದಿದ್ದೆನೀಗೆಲ್ಲವನು ಬಿಟ್ಟಿರುವೆ ಯಾತಕ್ಕೆ
ಏನಿದೆ ಇದರೊಳಗೆಂದೆಲ್ಲವನು ತೊರೆದಿದ್ದೆ ನನ್ನ ಗೆಲಲು

ಯಾರು ಇಲ್ಲದ ಕಡೆಗೆ ದಿಟ್ಟ ಹೆಜ್ಜೆಯನಿಟ್ಟು ನಾ
ತುಂಬ ನೋವುಣ್ಣುತಲಿ ಪಾದಗಳನೂರಿದ್ದೆ ನನ್ನ ಗೆಲಲು

ಹಿಂದೆ ಬಿತ್ತರಮನೆಯು ಮುಂದೆ ಅಡವಿಯ ಕಡಲು
ಕೈ ಬೀಸಿ ಕರೆದಿರಲು ಮಡದಿಯನು ತೊರೆದಿದ್ದೆ ನನ್ನ ಗೆಲಲು

ರಾಜ್ಯದೊಳಗವರೆ ರೋಗಿಷ್ಟ ಜನರುಗಳು, ಸತ್ತವರೆನ್ನೆದೆಯೊಳಗೆ
ಮರುಕವನ್ನೆಬ್ಬಿಸಿರಲು ಅತಿ ಸುಖವ ಬಿಟ್ಟೆದ್ದೆ ನನ್ನ ಗೆಲಲು

ನಡೆದು ನಡೆದೇ ನಾನು ಊರುಗಳನೂ ಮೆಟ್ಟಿ ದಾರಿಗಳನೂ
ಸವೆಸಿ ನಿಜ ಮಗನ ನಿದ್ದೆಯೊಳೆಚ್ಚೆತ್ತಿಕೊಂಡಿದ್ದೆ ನನ್ನ ಗೆಲಲು

ಅರಮನೆಯ ಸುಖ ಬೇಡ ಸಖಿಯರಾ ಸಂಗ ಕಡ, ನನ್ನದೇನಿಲ್ಲದ
ನಂಟು ಗಂಟುಗಳಿಗೆಲ್ಲ ತರ್ಪಣವ ಬಿಡಿಸಿದ್ದೆ ನನ್ನ ಗೆಲಲು

ಹೇ 'ರಾಜ' ಕೇಳಪ್ಪ ಇಂತಾದ ಇವನೊಳು ಒಲುಮೆ ಉದಯಿಸಿತಂತೆ
ಭಂಡಾರನವನಂತೆ, ನಾನವನ ಕೈಯ್ಯಗಲ ಹಿಡಿದಿದ್ದೆ ನನ್ನ ಗೆಲಲು

ರಾಶೇಕ್ರ

No comments:

Post a Comment