Thursday 8 August 2013

ಗಜಲ್ 3

ಗಜಲ್ 3

ಗೆಳತಿ ನೀನು ನೆರಳೊಳರಳೊ ಅಡವಿ ಸುಮದ ಹಾಗೆ ಕಾಡುವೆ
ಹಗಲಲರಳಿ ಇರುಳಲಳಿದ ಹೂವ ಘಮದ ಹಾಗೆ ಕಾಡುವೆ

ನೀನೆ ಘಮವು ನೀನೆ ಸುಮವು ಅದೇ ಅಮಲು ಕುಡಿಸಿ ನೀ
ಚಂದ ನಗುವ ನನ್ನ ಗೆಲುವ ಎಳೆಯ ಮಗುವ ಹಾಗೆ ಕಾಡುವೆ

ನೀನೆ ಬಂದೆ ದೂರದಿಂದ ಹೇಳದಾವ ಊರ ಅರಸಿ ನೀನು
ಎದುರು ನಿಂದು ಎದೆಯೊಳಿಳಿದ ಒಳ್ಳೆ ಹಾಡ ಹಾಗೆ ಕಾಡುವೆ

ನೀನೆ ಛಲವು ನೀನೆ ಗೆಲುವು ನನ್ನ ಪೂರ್ತಿ ಜನ್ಮಕೆ
ದೂರದಿಂದ ತೇಲಿ ಬಂದ ತಂಪು ಗಾಳಿ ಹಾಗೆ ಕಾಡುವೆ

ದೂರದೂರ 'ರಾಜ' ಕೇಳೊ ಇವಳೆ ನಿನ್ನ ಬಾಳು ಪೂರ
ಕಾದು ಕಾದು ನೊಂದ ರೈತ ಮಳೆಯ ಕಾಯೊ ಹಾಗೆ ಕಾಡುವೆ.

ರಾಶೇಕ್ರ

No comments:

Post a Comment