Sunday 11 August 2013

ಗಜಲ್ 5

ಗಜಲ್ 5

ಹೆಬ್ಬಂಡೆ ಗಿರಿಶಿಖರ ಕಂದಕ ಕಣಿವೆಯೊಳು ಹರಿಯುತ್ತಿದೆ ಜಲಧಾರೆ
ಭೋರ್ಗರೆಯುತ ತಾ ಜುಳುಜುಳು ಸುರಿಯುತ್ತಿದೆ ಜಲಧಾರೆ

ದಿಕ್ಕುದಿಕ್ಕುಗಳ ಬೆಸೆಯುತ ಹೊರಟಿದೆ ರಾಜ್ಯ ರಾಜ್ಯಗಳ ಹೆಣೆಯುತಲಿ
ಹಿನ್ನೀರೆಂದೋ ಮುನ್ನೀರೆಂದೋ ಕರೆದಾರೆಂದು ಸುಯ್ಯುತಿದೆ ಜಲಧಾರೆ

ಹಿಮಾಲಯದ ಬಳಿ ಮಂಜದು ಕರಗಿ ಸ್ಫಟಿಕದಂತದು ಗೋಚರಿತಿಪುದು
ಗಂಗೆ ಹೊಕ್ಕುಳೊಳು ಹರನ ಜಟೆಯೊಳು ಇಳಿಯುತ್ತಿದೆ ಜಲಧಾರೆ

ಎಲ್ಲೋ ಸಂಗಮ ನರ ಹೃದಯಂಗಮ ಕೋರೈಸುತದೆ ಕಣ್ಣು
ಒಮ್ಮೆ ಪಾವನ ಒಮ್ಮೆ ಮೈಲಿಗೆ ಬುಸುಗುಡುತ್ತಿದೆ ಜಲಧಾರೆ

ಅದೋ 'ರಾಜ' ಅದೆ ಸಾಗರ ಕಾಣೊ ಅಧ್ಬುತ ಅಲೆಯಲೆ ನೀಲತೆರೆ
ತುಂಬು ನೋವಿನಲಿ ತಟಸ್ಥವಾಗಲು ಬಲು ನರಳುತ್ತಿದೆ ಜಲಧಾರೆ.

ರಾಶೇಕ್ರ

No comments:

Post a Comment