Wednesday 14 August 2013

ಗಜಲ್ 9

ಗಜಲ್ 9

ಯಾರೂ ಇರದ ಕನಸಿನ ಊರಿಗೆ ನಿನ್ನದೆ ಹೆಸರನು ಇಡಲೇನೆ
ಬಂದರು ಬಾರದ ಎದೆಗುಡಿಯೊಂದಕೆ ನಿನ್ನದೆ ಹೆಸರನು ಇಡಲೇನೆ

ಆಡುತ ಬೆಳೆದ ಹಳೆ ನೆನಪೊಂದು ಯಾಕೋ ಸುಮ್ಮನೆ ಕಾಡುತಿದೆ
ಕಾಡುವ ಈ ಹಳೆ ನೆನಪಿಗು ಕೂಡ ನಿನ್ನದೆ ಹೆಸರನು ಇಡಲೇನೆ

ಬೀದಿಯ ಕೊನೆಯ ಓಣಿಯ ದಾರಿಗೆ ಹೂಗಳ ಹಾಸುತ ಕಾಯುವೆನು
ಬಾರದೆ ಉಳಿದರೆ ವಿರಹಕೆ ಈಗಲೆ ನಿನ್ನದೆ ಹೆಸರನು ಇಡಲೇನೆ

ಮರಳುಗಾಡೊಳು ನಿರೀಕ್ಷೆಯ ನೀರು ನೀ ದಾಹವನಾರಿಸೆ ಕಾದಿರುವೆ
ಪ್ರಾಣವನುಳಿಸುವ ಓಯಸಿಸ್ ನೀರಿಗೂ ನಿನ್ನದೆ ಹೆಸರನು ಇಡಲೇನೆ

ಬಗೆಬಗೆ ಕೋರಿಕೆ ಈಡೇರಿಕೆಗೆ ಕಾದಿರುವನು ಈ ಬಡ 'ರಾಜ'
ಫಲಿಸದ ಹೊರತು ಸೋಲಿಗು ಕೂಡ ನಿನ್ನದೆ ಹೆಸರನೆ ಇಡಲೇನೆ.

ರಾಶೇಕ್ರ

No comments:

Post a Comment