Wednesday 4 September 2013

ಗಜಲ್ 11

ಬೆತ್ತಲೆ ಬೆನ್ನಲಿ ಬೆವರುವ ಹೊತ್ತಲಿ ನೀನಿರಬೇಕಿತ್ತು
ಕತ್ತಲೆಯೊಳಗೆ ಕರಗುವ ಹೊತ್ತಲಿ ನೀನಿರಬೇಕಿತ್ತು

ಸುತ್ತಲು ಕವಿದ ಕಾರಿರುಳೊಳು ನಾ ಅಲೆಯುವ ಪುಂಡೈದ
ಪುಂಡಾಟಿಕೆಯ ಪರಿಧಿಯ ಕೊನೆಯಲಿ ನೀನಿರಬೇಕಿತ್ತು

ನನಸಾಗದಿರೊ ರಾತ್ರಿಗೆ ಬರುವ ಫಜೀತಿ ಸ್ವಪ್ನಗಳೆಷ್ಟೆಷ್ಟೋ
ಆ ಸ್ವಂತಕೆ ಹೊಸೆದ ಬಾಡಿಗೆ ಕನಸಲಿ ನೀನಿರಬೇಕಿತ್ತು

ಸುಮ್ಮನೆ ಘಮ್ಮೆನೊ ಹೂಗಳಿಗೆಲ್ಲ ನಿನ್ನದೆ ಸುಂದರ ಕನವರಿಕೆ
ಆ ಕನವರಿಕೆಯ ಕೊನೆಗಾಣಿಸುವೆದೆಯಲಿ ನೀನಿರಬೇಕಿತ್ತು

ಸಖಿ ಬಿಟ್ಟೋದ ಬೆಂಗಾಡೂರಿಗೆ ಮಳೆ ಥರ ಕಣೊ ನೀ 'ರಾಜ'
ಹೊರಡುವ ಮುನ್ನ ಹೊಳೆ ಹರಿಸಿದ ಕಣ್ಣಲಿ ನೀನಿರಬೇಕಿತ್ತು.

No comments:

Post a Comment