Wednesday 4 September 2013

ಗಜಲ್ 12

ಹೀಗೊಂದಿಷ್ಟು ಹೂಗಳ ತಂದೆ ನಿನಗೇ ಕೊಡಲೆಂದೆ
ಆರಿಸಿ ಆರಿಸಿ ಮುಡಿಸಲು ನಿಂದೆ ನಿನಗೇ ಕೊಡಲೆಂದೆ

ಯಾರೂ ಕಾಣದ ಹೂದೋಟದಲಿ ಅರಳಿದ ಹೂವುಗಳ
ಒಂದೊಂದಾಗೇ ಹೆಣೆಯುತ ಹೋದೆ ನಿನಗೇ ಕೊಡಲೆಂದೆ

ಸೂರ್ಯನ ಬೆಳಕು ಹಿಡಿಯಷ್ಟಿತ್ತು ಬೆಳದಿಂಗಳಿನಂತೆ
ಆ ತೋಟದಲೇ ಬಿಡಿಸಿದೆ ಕಾಣದೆ ನಿನಗೇ ಕೊಡಲೆಂದೆ

ಚಂದದ ಕನಸಿನ ಅಂದದ ತೋಟದಿ ಅರಳಿದ ಮೊಗ್ಗುಗಳ
ಎದೆಯೊಳಗಿಟ್ಟು ಅರಳಲು ಕಾದೆ ನಿನಗೇ ಕೊಡಲೆಂದೇ

ಬಣ್ಣಿಸುವ ಆ 'ರಾಜ'ನ ಕಣ್ತಪ್ಪಿಸಿ ಒಂದೆರಡನು ಕಿತ್ತು
ದಾರಿಯಲಿ ಮುತ್ತಿಡುತ ಬಂದೆ ನಿನಗೇ ಕೊಡಲೆಂದೆ.

No comments:

Post a Comment