Wednesday 4 September 2013

ಗಜಲ್ 14

ನೀ ಸನಿಹಕೆ ಬಾರದ ಸಂಜೆಗಳೆಲ್ಲ ನಗುತಿದೆ ಬೇಡೆನಗೆ
ನೀ ಸುಳಿಯದ ವಿನಹ ಕನಸುಗಳಲ್ಲಿ ಏನಿದೆ ಬೇಡೆನಗೆ

ಧೋ ಎನ್ನುವ ಮಳೆಯನು ಹೊತ್ತು ತಂದರೆ ಕಾರ್ಮೋಡ
ವಿನಾಕಾರಣ ಸಲ್ಲದ ಮಳೆಯಲಿ ಖುಷಿಯಿದೆ ಬೇಡೆನಗೆ

ಸುಯ್ಯನೆ ಬೀಸುವ ಗಾಳಿಗೆ ಹೆದರಿದೆ ಒಣಗಿದ ಮರದೆಲೆಯು
ಆ ಒಣ ಎಲೆಗೂನು ಬೇಡವಂತೆ ಅದು ಕರೆದಿದೆ ಬೇಡೆನಗೆ

ಜುಳು ಜುಳು ಎನ್ನುವ ಝರಿಯ ನೀರಲಿ ಛಂದಸ್ಸಿನ ಕವನ
ಆ ಕವನದ ಕೊನೆಯಲಿ ತುಳಿಯುವ ನೋವಿದೆ ಬೇಡೆನಗೆ

ಹೃದಯವನಾಳುವ ಕಂಗೊಳಿಪ ನಾ ಬರದೂರಿನ 'ರಾಜ'
ನಿನ ಕಂಗಳಲಿ ರುಚಿ ರಕುತದ ಘಮಲು ಕೊಲ್ಲುತದೆ ಬೇಡೆನಗೆ.

No comments:

Post a Comment